ದೇಶ

ಕೇರಳ ಸಿಎಂ ಚಾಂಡಿ ಲಂಚ ಹಗರಣ ಬಹಿರಂಗ ಪಡಿಸಿದ ಸರಿತಾಗೆ ಜೀವ ಬೆದರಿಕೆ

Mainashree
ಕೊಯಂಬತ್ತೂರ್: ಸೋಲಾರ್ ಲಂಚ ಹಗರಣಲ್ಲಿ ಕೇರಳದ ಮುಖ್ಯಮಂತ್ರಿ ಉಮನ್ ಚಾಂಡಿ ಭಾಗಿಯಾಗಿದ್ದಾರೆ ಎಂದು ಹೇಳಿದಾಗಿನಿಂದಲೂ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸೋಲಾರ ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್ ಹೇಳಿದ್ದಾರೆ. 
ಮುಖ್ಯಮಂತ್ರಿ ಉಮನ್ ಚಾಂಡಿಯವರಿಗೆ ರು.1.90 ಕೋಟಿ ಲಂಚ ನೀಡಿರುವುದಾಗಿ ಹೇಳಿಕೆ ನೀಡಿದಾಗಿನಿಂದಲೂ ನನಗೆ ಪ್ರತಿನಿತ್ಯ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಸರಿತಾ ತಿಳಿಸಿದ್ದಾರೆ. 
ಸೋಲಾರ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸರಿತಾ ನಾಯರ್, ಮುಖ್ಯಮಂತ್ರಿ ಉಮನ್ ಚಾಂಡಿಯವರಿಗೆ ರು.1.90 ಕೋಟಿ ಲಂಚ ನೀಡಿರುವುದಾಗಿ ಹೇಳಿದ್ದರು. ಈ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದ ತ್ರಿಶೂರ್ ವಿಜಿಲೆನ್ಸ್ ಕೋರ್ಟ್, ಉಮನ್ ಚಾಂಡಿ ಹಾಗೂ ಇಂದನ ಸಚಿವರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಸೂಚನೆ ನೀಡಿತ್ತು. 
ಸೋಲಾರ ಯೋಜನೆಗಾಗಿ ಅನುಮತಿ ಪಡೆಯಲು ತಮ್ಮ ಸಹದ್ಯೋಗಿಯೊಬ್ಬರು ಸಿಎಂ ಉಮನ್ ಚಾಂಡಿಗೆ ಲಂಚ ನೀಡಿದ್ದರು. ಚಾಂಡಿಯವರ ಆಪ್ತ ಕಾರ್ಯದರ್ಶಿ ಚಿಕ್ಕುಮೊನ್ ಜಾಕೋಬ್ 7 ಕೋಟಿ ರುಪಾಯಿಗಳ ಲಂಚದ ಬೇಡಿಕೆ ಇಟ್ಟಿದ್ದರು. ಅದಲ್ಲದೇ, ವಿದ್ಯುತ್ ಖಾತೆ ಸಚಿವ ಆರ್ಯದಾನ್ ಮುಹಮ್ಮದ್ ಅವರಿಗೆ ಅವರ ಕಾರ್ಯದರ್ಶಿ ಕೇಶವನ್ ರು.80 ಲಕ್ಷ ಲಂಚವಾಗಿ ಸ್ವೀಕರಿಸಿದ್ದರು ಎಂದು ಸರಿತಾ ತನಿಖಾ ಆಯೋಗಕ್ಕೆ ತಿಳಿಸಿದ್ದರು.
SCROLL FOR NEXT