ಉತ್ತರ ಪ್ರದೇಶದಲ್ಲಿ ಶಂಕಿತ ಉಗ್ರ ಮೌಲಾನಾ ಬಂಧನ, ಎನ್ಐಎ ವಶಕ್ಕೆ
ರಾಷ್ಟ್ರೀಯ ಭದ್ರತಾ ಪಡೆ(ಎನ್ಐಎ) ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದಾನೆ ಎಂಬ ಆರೋಪದ ಮೇಲೆ ಮೌಲಾನಾ ಮುಫ್ತಿ...
ನವದೆಹಲಿ: ರಾಷ್ಟ್ರೀಯ ಭದ್ರತಾ ಪಡೆ(ಎನ್ಐಎ) ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದಾನೆ ಎಂಬ ಆರೋಪದ ಮೇಲೆ ಮೌಲಾನಾ ಮುಫ್ತಿ ಅಬ್ದುಸ್ ಸಮಿ ಖಾಸ್ಮಿ ಶಂಕಿತ ಉಗ್ರನನ್ನು ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ಬಂಧಿಸಿದ್ದು, ಎನ್ಐಎ ವಶಕ್ಕೆ ಪಡೆದಿದೆ.
ಮುಸ್ಲಿಂ ಯುವಕರಿಗೆ ದೇಶದ್ರೋಹ ಕೆಲಸ ಮಾಡಲು ಕುಮ್ಮಕ್ಕು ನೀಡುತ್ತಿದ್ದ ಎಂಬ ಆರೋಪದ ಮೇಲೆ ಮೌಲಾನಾ ಮುಫ್ತಿ ಅಬ್ದುಲ್ ಸಮಿ ಖಾಸ್ಮಿಯನ್ನು ಬಂಧಿಸಲಾಗಿದೆ.
ಗಣರಾಜ್ಯೋತ್ಸವ ಸಂದರ್ಭದಲ್ಲಿ ದೇಶವ್ಯಾಪಿ ಸ್ಫೋಟಗಳನ್ನು ನಡೆಸಲು ರೂಪಿಸುವ ಸಂಚು ರೂಪಿಸಿದ್ದ ಗುಂಪಿನಲ್ಲಿ ಈತನೂ ಒಬ್ಬ ಎಂಬುದು ಬಂಧಿತ 15 ಮಂದಿಯನ್ನು ಎನ್ಐಎ ವಿಚಾರಣೆಗೆ ಗುರಿಪಡಿಸಿದಾಗ ಬೆಳಕಿಗೆ ಬಂದಿದೆ. ವಾಟ್ಸ್ ಆಪ್ನಲ್ಲಿ ಗ್ರೂಪ್ ನಿರ್ಮಿಸಿ ನಿರಂತರವಾಗಿ ಈತ ಉಗ್ರವಾದ ಪಾಠ ಮಾಡುತ್ತಿದ್ದ ಎಂದು ರಾಷ್ಟ್ರೀಯ ಭದ್ರತಾ ಪಡೆ ತಿಳಿಸಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.