ಸಾಂದರ್ಭಿಕ ಚಿತ್ರ 
ದೇಶ

ಡೇಟಿಂಗ್, ಚೀಟಿಂಗ್ ಗೆ ಇನ್ನು ಮ್ಯಾಟ್ರಿಮೋನಿಯಲ್ ಸೈಟ್ ಗಳಲ್ಲಿ ಅವಕಾಶವಿಲ್ಲ

ಇದು ಇಂಟರ್ನೆಟ್ ಕಾಲ. ಮ್ಯಾಟ್ರಿಮೋನಿಯಲ್ ಸೈಟ್ ಗಳು ನೂರಾರು ಇವೆ. ಅದರ ಮೂಲಕ ಜೀವನ ಸಂಗಾತಿಯನ್ನು ಆರಿಸಿಕೊಂಡು ಮದುವೆಯಾದವರು, ಆಗುವವರು...

ನವದೆಹಲಿ: ಇದು ಇಂಟರ್ನೆಟ್ ಕಾಲ. ಮ್ಯಾಟ್ರಿಮೋನಿಯಲ್ ಸೈಟ್ ಗಳು ಹತ್ತಾರು ಇವೆ. ಅದರ ಮೂಲಕ ಜೀವನ ಸಂಗಾತಿಯನ್ನು ಆರಿಸಿಕೊಂಡು ಮದುವೆಯಾದವರು ಕೂಡ ಹಲವರು.ಆದರೆ ಇಂತಹ ಮದುವೆ ಪೋರ್ಟಲ್ ಗಳನ್ನು ಬಳಸುವಾಗ ಎಚ್ಚರಿಕೆಯಿಂದಿರಿ ಎಂಬ ಸಂದೇಶ ನಿಮ್ಮ ಮೇಲ್ ಐಡಿಗೆ, ಫೇಸ್ ಬುಕ್ ಅಕೌಂಟ್ ಇತ್ಯಾದಿಗಳಲ್ಲಿ ಬಂದರೂ ಬರಬಹುದು.

ಮದುವೆ ಪೋರ್ಟಲ್ ಗಳನ್ನು ಜೀವನ ಸಂಗಾತಿಯನ್ನು ಹುಡುಕುವ ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ಬಳಸಬೇಡಿ ಎಂದೋ ಅಥವಾ ಇಂತಹ ಸೈಟ್ ಗಳನ್ನು ಬಳಸುವಾಗ ಎಚ್ಚರಿಕೆಯಿಂದಿರಿ, ಮೋಸ ಹೋಗಬೇಡಿ ಎಂಬ ಸಂದೇಶ ಬರಬಹುದು.

'' ಇಂದು ಅನೇಕ ಮಂದಿ ಇಂತಹ ಮದುವೆ ಪೋರ್ಟಲ್ ಗಳನ್ನು ಡೇಟಿಂಗ್ ಇತ್ಯಾದಿಗಳಿಗೆ ಬಳಸಿಕೊಳ್ಳುತ್ತಾರೆ. ಎಷ್ಟೋ ಮಂದಿ ಯುವತಿಯರು ಮೋಸ ಹೋಗುತ್ತಾರೆ. ಹಾಗಾಗಿ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಮುನ್ನೆಚ್ಚರಿಕೆ ಸಂದೇಶಗಳನ್ನು ಪ್ರಕಟಿಸಬೇಕೆಂದು ಹೇಳುತ್ತೇವೆ'' ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯಾ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರತಿನಿಧಿಗೆ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ, ಮ್ಯಾಟ್ರಿಮೋನಿಯಲ್ ಸೈಟ್ ಗಳಲ್ಲಿ ದಾಖಲು ಮಾಡಿಕೊಳ್ಳುವವರಿಗೆ ಆಧಾರ್ ಸಂಖ್ಯೆ ಅಥವಾ ಬೇರೆ ಯಾವುದಾದರೂ ಗುರುತಿನ ವಿವರಗಳನ್ನು ಮಹಿಳಾ ಇಲಾಖೆ ಕಡ್ಡಾಯ ಮಾಡಲಿದೆ. ವೆಬ್ ಸೈಟ್ ಮಾಲೀಕರು ಸಹಾಯವಾಣಿಯೊಂದನ್ನು ಸ್ಥಾಪಿಸಿ ಅಲ್ಲಿ ದೂರುಗಳನ್ನು ಕಾಲಕಾಲಕ್ಕೆ ಸ್ವೀಕರಿಸಬೇಕು ಮತ್ತು ಹೆಸರು ದಾಖಲಿಸಿಕೊಂಡವರ ವಿವರಗಳನ್ನು ಕಾಲಕಾಲಕ್ಕೆ ಅಪ್ ಡೇಟ್ ಮಾಡಬೇಕೆಂದು ಕಾನೂನು ತರಲಿದೆ.
 
ಮ್ಯಾಟ್ರಿಮೋನಿಯಲ್ ಸೈಟ್ ಗಳ ನೀತಿ ನಿಯಮ ರೂಪಣೆಗೆ ಅಂತರ ಸಚಿವಾಲಯದ ಗುಂಪನ್ನು ರಚಿಸಿ ಅದು ಮಾರ್ಗಸೂಚಿಗಳನ್ನು ಸಿದ್ದಪಡಿಸಲಿದೆ. ಈ ಗುಂಪಿನಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಗೃಹ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಗಳ ಪ್ರತಿನಿಧಿಗಳು ಇರುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!