'ಟೀಂ ರಾಹುಲ್ ಗಾಂಧಿ' ಮೂಲಕ ಕಾಂಗ್ರೆಸ್ ಹೊಸ ಹೆಜ್ಜೆಗೆ ಸಿದ್ಧತೆ?
ಳೆಯ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲ ಪಡಿಸುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ನಾಯಕರ ತಂಡವೊಂದು ರಚನೆಯಾಗುತ್ತಿದ್ದೆ. ಇದಕ್ಕಾಗಿ ಯುವ ನಾಯಕರ...
ದೆಹಲಿ: ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ, ತಮ್ಮ ಪಕ್ಷವನ್ನು ಬಲಪಡಿಸುವುದಕ್ಕಾಗಿ ಸಿದ್ಧತೆಗಳನ್ನು ನಡೆಸತೊಡಗಿದ್ದಾರೆ.
ಮೇಲ್ ಟುಡೇ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ, ಹಳೆಯ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲ ಪಡಿಸುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ನಾಯಕರ ತಂಡವೊಂದು ರಚನೆಯಾಗುತ್ತಿದ್ದೆ. ಇದಕ್ಕಾಗಿ ಯುವ ನಾಯಕರ ರೆಸ್ಯೂಮೆಗಳನ್ನು ಪರಿಶೀಲಿಸಿ, ಸ್ವತಃ ರಾಹುಲ್ ಗಾಂಧಿಯವರೇ ಸಂದರ್ಶನವನ್ನೂ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಪಕ್ಷದ ಸುಮಾರು 600 ಕಾರ್ಯಕರ್ತರನ್ನು ರಾಹುಲ್ ಸಂದರ್ಶನ ನಡೆಸಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಭಾರೀ ಸೋಲುಂಡ ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ರಾಹುಲ್ ಕಾರ್ಯಪ್ರವರ್ತರಾಗಿದ್ದಾರೆ. ಆದರೆ ಪಕ್ಷದೊಳಗೆಯೇ ಅಡೆತಡೆಗಳಿರುವುದರಿಂದ ಕೆಲವೊಂದು ಬದಲಾವಣೆಗಳನ್ನು ಮಾಡಲು ರಾಹುಲ್ ನಿಂದ ಸಾಧ್ಯವಾಗಿಲ್ಲ.
ಪಕ್ಷದಲ್ಲಿನ ಸಂಘ ಶಕ್ತಿ ವರ್ಧಿಸಲು 'ಟೀಂ ರಾಹುಲ್' ಎಂಬ ಹೊಸ ತಂಡವೊಂದು ರಚನೆಯಾಗಲಿದ್ದು, ಯುವ ನಾಯಕರ ಪಡೆಯನ್ನು ರಾಹುಲ್ ಮುನ್ನಡೆಸಲಿದ್ದಾರೆ. ಈ ತಂಡದಲ್ಲಿ ಹಳೆ ನಾಯಕರ ಅನುಭವ ಪಾಠದೊಂದಿಗೆ ಯುವ ನಾಯಕರು ಕಾರ್ಯಪ್ರವರ್ತರಾಗುವಂತೆ ಮಾಡುವ ಯೋಚನೆ ರಾಹುಲ್ ಅವರದ್ದು.
ಆದಾಗ್ಯೂ, ರಾಹುಲ್ಗೆ ಶೀಘ್ರದಲ್ಲೇ ಕಾಂಗ್ರೆಸ್ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಡಲಾಗುವುದು ಎಂಬ ಮಾತುಗಳೂ ಕೇಳಿ ಬರುತ್ತವೆ. ಆದರೆ ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.