ನವದೆಹಲಿ: ವಿವಾದಿತ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಂಬಂಧ ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್) ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಲು ನಿರ್ಧರಿಸಿದ್ದು, ಇದಕ್ಕಾಗಿ 250 ಮಂದಿಗೆ ಆನ್ ಲೈನ್ ತರಬೇತಿ ನೀಡಲು ಮುಂದಾಗಿದೆ.
ಫೆಬ್ರವರಿ 20 ರಂದು ತರಬೇತಿ ನೀಡಲು ಮುಂದಾಗಿರುವ ಆರ್‌ಎಸ್‌ಎಸ್ ಸಾಮಾಜಿಕ ಜಾಲತಾಣ ಟ್ರೆಂಡ್ ಗಳ ಬಗ್ಗೆ ಪರಿಣತಿ ಹೊಂದಿರುವಂತೆ ಒಟ್ಟು 250 ಮಂದಿಗೆ ತರಬೇತಿ ನೀಡಲಾಗುತ್ತದೆ ಎಂದು ಕಾರ್ಯಕ್ರಮದ ಬಗ್ಗೆ ಸಂಘಟನೆಯ ಮುಖಂಡರೊಬ್ಬರು ಹೇಳಿದ್ದಾರೆ.
ನೋಂದಣಿ ಮಾಡಿಸಿಕೊಳ್ಳುವಂತೆ ಸ್ವಯಂಸೇವಕರಿಗೆ ಅರ್ಜಿಗಳನ್ನು ವಿತರಿಸಲಾಗಿದೆ. ಫೇಸ್ ಬುಕ್, ಟ್ವಿಟರ್, ವಾಟ್ಸ್ ಆ್ಯಪ್ ಪೈಕಿ ಯಾವ ಮಾಧ್ಯಮದಲ್ಲಿ ಹೆಚ್ಚಾಗಿ ಸಕ್ರಿಯರಾಗಿದ್ದಾರೆ ಎಂಬ ಮಾಹಿತಿ ನೀಡುವಂತೆಯೂ ಸೂಚಿಸಲಾಗಿದೆ.