ಬಿಜ್ನೋರ್, ಬಿಹಾರ: ಬಿಹಾರ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಶ್ವೇಶ್ವರ ಓಝಾ ಅವರನ್ನು ಶುಕ್ರವಾರ ಸಂಜೆ ದುಷ್ಕರ್ಮಿಗಳು ಭೋಜಪುರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಕೊಲೆ, ದರೋಡೆ ಸೇರಿದಂತೆ ಸುಮಾರು 16 ಪೊಲೀಸ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಓಝಾ ಕಳೆದ ಬಿಹಾರ ವಿಧಾಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.
ಇನ್ನು ಓಝಾ ಕೊಲೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಬಿಹಾರ ಮತ್ತೆ ಜಂಗಲ್ ರಾಜ್ ಆಗುತ್ತಿದೆ ಎಂದು ಆರೋಪಿಸಿದೆ.