ದೇಶ

ಪಿಎಚ್ ಡಿ ಮಾರ್ಗದರ್ಶಕನಿಂದ ಲೈಂಗಿಕ ಕಿರುಕುಳ: ವಿದ್ಯಾರ್ಥಿಗಳ ಆರೋಪ

Mainashree
ಸೇಲಂ: ರಾಸಾಯನಿಕ ಉಪ್ಯಾನ್ಯಾಸಕ ನಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಮೂವರು ಯುವತಿಯರು ಸೇರಿದಂತೆ ಏಳು ಪಿಎಚ್ ಡಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಈ ಸಂಬಂಧ ಕಾಲೇಜಿನ ವೈಸ್ ಚಾನ್ಸೆಲರ್ ನಲ್ಲಿ ದೂರು ಸಲ್ಲಿಸಿರುವ ವಿದ್ಯಾರ್ಥಿಗಳು, ಪಿಎಚ್ ಡಿ ಮಾರ್ಗದರ್ಶಕ ಡಿ ಗೋಬಿ(42) ಅವರು ನಮ್ಮ ದೌರ್ಜನ್ಯವೆಸಗುತ್ತಿದ್ದಾರೆ. ಯವಕರ ಕೈಯಲ್ಲಿ ತಮ್ಮ ಮನೆಗೆಲಸ ಮಾಡಿಸುತ್ತಾರೆ, ಯುವತಿರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ನಮ್ಮ ಕೈಯಲ್ಲಿ ಮನೆ ಕೆಲಸ, ಬಟ್ಟೆ ಒಗೆತ, ಕೊಠಡಿ, ಬಿಲ್ ಪಾವತಿ ಸೇರಿದಂತೆ ಇತರೆ ಸ್ವಂತ ಕೆಲಸಗಳನ್ನು ಮಾಡುಸುತ್ತಿದ್ದರು. ಇನ್ನು ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ತರಗತಿ ಮುಗಿದ ನಂತರವೂ ವಿದ್ಯಾರ್ಥಿನಿಯರನ್ನು ಕರೆದು ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೇ, ತಮ್ಮ ಮನೆಯಲ್ಲಿ ಉಳಿದುಕೊಳ್ಳುವಂತೆ ವಿದ್ಯಾರ್ಥಿನಿಯರಿಗೆ ಹೇಳುತ್ತಿದ್ದರು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ನಾನು ಮತ್ತು ನನ್ನ ಪತ್ನಿ ಹೊರಗಡೆ ಹೋದಾಗ ನಮ್ಮ ಅವಳಿ ಮಕ್ಕಳನ್ನು ನೋಡಿಕೊಳ್ಳಬೇಕು ಎಂದು ಗೋಬಿ ಅವರು ನಮಗೆ ಸೂಚಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.
ವಿದ್ಯಾರ್ಥಿಗಳು ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಪ್ರೊ.ಗೋಬಿ. ಇಷ್ಟು ವರ್ಷಗಳ ಸೇವೆಯಲ್ಲಿ ಯಾವ ವಿದ್ಯಾರ್ಥಿಗಳು ಈ ರೀತಿ ಆರೋಪ ನನ್ನ ಮೇಲೆ ಹೊರಿಸಿರಲಿಲ್ಲ. ಕೇವಲ 30 ದಿನಗಳ ಹಿಂದೆಯಷ್ಟೇ ಈ ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. ಸದ್ಯದಲ್ಲೇ ನಾನು ಅಮೆರಿಕಾಗೆ ತೆರಳುತ್ತಿದ್ದು, ಅದರಿಂದ ಅವರ ಅಧ್ಯಯನ ನಿಧಾನಗತಿಯಲ್ಲಿ ಸಾಗಬಹುದು ಎಂಬ ಭಯದಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 
2004ರಲ್ಲಿ ಸಹಾಯಕ ಪ್ರಾಧ್ಯಪಕನಾಗಿ ಸೇರ್ಪಡೆಗೊಂಡ ಗೋಬಿ, ಅಡಿಶನಲ್ ಕೋ ಅರ್ಡಿನೇಟರ್ ಆಗಿ ಕಾರ್ಯನಿರ್ವಹಿಸಿದ್ದರು.
SCROLL FOR NEXT