ನವದೆಹಲಿ: ಆಮ್ ಆದ್ಮಿ ಪಕ್ಷದ ಅಧಿಕಾರಾವಧಿಯಲ್ಲಿ ದೆಹಲಿಯಲ್ಲಿ ಭ್ರಷ್ಟಾಚಾರ ಕಡಿಮೆಯಾಗಿಲ್ಲ ಎಂದು ದೆಹಲಿಯ ಶೇ.77 ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.
ಸ್ವರಾಜ್ ಅಭಿಯಾನ ನಡೆಸಿದ ಸಮೀಕ್ಷೆ ಪ್ರಕಾರ, ದೆಹಲಿಯಲ್ಲಿ ಆಪ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಭ್ರಷ್ಟಾಚಾರ ಕಡಿಮೆ ಆಗಿಲ್ಲ ಎಂಬುದು ಶೇ.77 ರಷ್ಟು ಜನರ ಅಭಿಪ್ರಾಯವಾದರೆ ಇನ್ನು ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ನೀಡಿದ್ದ ಭರವಸೆಗಳಾದ 20 ಸಾವಿರ ಲಿಟರ್ ಉಚಿತ ನೀರು, ವಿದ್ಯುತ್ ದರ ಇಳಿಕೆ ಸೇರಿದಂತೆ ಹಲವು ಭರವಸೆಗಳನ್ನು ಈಡೇರಿಸಿಲ್ಲ ಎಂದು ಶೇ.62 ರಷ್ಟು ಮಂದಿ ಆರೋಪಿಸಿದ್ದಾರೆ.
ಸ್ವರಾಜ್ ಅಭಿಯಾನ ಆಮ್ ಆದ್ಮಿ ಪಕ್ಷದಿಂದ ಉಚ್ಛಾಟನೆಗೊಂಡ ನಾಯಕರ ಸಂಘಟನೆಯಾಗಿದ್ದು ಫೆ.10 -14 ವರೆಗೆ 70 ವಿಧಾನಸಭಾ ಕ್ಷೇತ್ರಗಳಲ್ಲಿ 10 ,000 ನಾಗರಿಕರನ್ನು ಸಮೀಕ್ಷೆಗೊಳಪಡಿಸಬೇಕಾಗಿದೆ. ಭ್ರಷ್ಟಾಚಾರ ನಿರ್ಮೂಲನೆಯೇ ಮುಖ್ಯ ಉದ್ದೇಶವನ್ನಾಗಿಟ್ಟುಕೊಂಡು ಆಮ್ ಆದ್ಮಿ ಪಕ್ಷ ಚುನಾವಣೆ ಎದುರಿಸಿದ್ದರ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಆಪ್ ಸರ್ಕಾರ ಬಂದ ನಂತರ ಭ್ರಷ್ಟಾಚಾರ ಕಡಿಮೆಯಾಗಿದೆಯೇ ಎಂಬುದು ಪ್ರಮುಖ ವಿಷಯವಾಗಿದೆ.