ನವದೆಹಲಿ: ಜೆಎನ್ ಯು ವಿಶ್ವವಿದ್ಯಾನಿಲಯದಲ್ಲಿ ನಡೆದ ದೇಶವಿರೋಧಿ ಘಟನೆಯ ಕುರಿತು ವಿಚಾರಣೆ ನಡೆಸಲು ಆಂತರಿಕವಾಗಿ ರಚೆನೆಯಾಗಿರುವ ವಿಶ್ವವಿದ್ಯಾನಿಲಯ ತನಿಖಾ ಸಮಿತಿ ಎದುರು ಹಾಜರಾಗಲು ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ.
ವಿದ್ಯಾರ್ಥಿ ಪರಿಷತ್ ನ ಸದಸ್ಯರನ್ನು ಸಮಿತಿಯ ಎದುರು ಹಾಜಾರಗಲು ಸೂಚಿಸಲಾಗಿತ್ತು, ತಮ್ಮನ್ನು ಅಮಾನತುಗೊಳಿಸಿರುವುದನ್ನು ಅನ್ಯಾಯ ಎಂದಿರುವ 8 ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ತನಿಖಾ ಸಮಿತಿಯ ಉದ್ದೇಶವನ್ನು ಪ್ರಶ್ನಿಸಿದ್ದು ತನಿಖಾ ಸಮಿತಿಯಲ್ಲಿ ಹೆಚ್ಚು ಸದಸ್ಯರನ್ನು ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದು ವಿದ್ಯಾರ್ಥಿಗಳ ಕತೆಯಾದರೆ ಇನ್ನು ತರಗತಿಗಳು ಹಾಳಾಗುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಧ್ಯಾಪರಕರಲ್ಲೇ ಒಡಕು ಮೂಡಿದೆ. " ವಿಶ್ವವಿದ್ಯಾನಿಲಯ ರಚಿಸಿರುವ ಸಮಿತಿಯಲ್ಲಿ ಮೂರು ಸದಸ್ಯರಿದ್ದು ಎಲ್ಲಾ ಸದಸ್ಯರೂ ಒಂದೇ ವಿಭಾಗದವರಾಗಿದ್ದಾರೆ. ಗಂಭೀರ ವಿವಾದದ ತನಿಖೆ ನಡೆಸಲು ಸಮಿತಿಯಲ್ಲಿ ಹೊರಗಿನವರಿಗೂ ಅವಕಾಶ ನೀಡಬೇಕು ಎಂದು ಜೆಎನ್ ಯು ಟಿಚರ್ಸ್ ಸಂಘಟನೆಯ ಕಾರ್ಯದರ್ಶಿ ಬಿಕ್ರಮಾದಿತ್ಯ ಚೌಧರಿ ಹೇಳಿದ್ದಾರೆ.
ವಿವಿಧ ಸಮಿತಿಗಳ ಸದಸ್ಯರನ್ನು ತನಿಖಾ ಸಮಿತಿಗೆ ನೇಮಿಸಬೇಕು ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡಿದರೂ ಶೈಕ್ಷಣಿಕ ಕರ್ತವ್ಯಗಳನ್ನು ನಿರ್ವಹಿಸುತ್ತೇವೆ ನಮ್ಮ ಬೇಡಿಕೆಗಳನ್ನು ಉಪಕುಲಪತಿಗಳಿಗೆ ಸಲ್ಲಿಸಿದ್ದೇವೆ ಎಂದು ಬಿಕ್ರಮಾದಿತ್ಯ ಚೌಧರಿ ತಿಳಿಸಿದ್ದಾರೆ. ಫೆ.9 ರಂದು ಜೆಎನ್ ಯು ವಿಶ್ವವಿದ್ಯಾನಿಲಯದಲ್ಲಿ ಕೆಲವು ವಿದ್ಯಾರ್ಥಿಗಳು ಉಗ್ರ ಅಫ್ಜಲ್ ಗುರು ನನ್ನು ಬೆಂಬಲಿಸಿ ದೇಶವಿರೋಧಿ ಘೋಷಣೆ ಕೂಗಿದ್ದ ಘಟನೆಗೆ ಸಂಬಂಧಿಸಿದಂತೆ ಜೆಎನ್ ಯು ವಿವಿ ವಿದ್ಯಾರ್ಥಿ ಸಂಘದ ಸದಸ್ಯರನ್ನು ವಿಶ್ವವಿದ್ಯಾನಿಲಯ ತನಿಖಾ ಸಮಿತಿ ಎದುರು ಹಾಜರಾಗಲು ಸೂಚಿಸಲಾಗಿತ್ತು.