ಚೆನ್ನೈ: ಜವಾಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿದ್ದ ತಮಿಳುನಾಡಿನ ಜನಪದ ಗಾಯಕ ಕೋವನ್ ಮತ್ತು ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ.
ಜೆಎನ್ ಯು ಸಂಘಟನೆ ಅಧ್ಯಕ್ಷ ಕನ್ಹಯ್ಯ ಕುಮಾರ್ ಬಂಧನವನ್ನು ಖಂಡಿಸಿ ಕೋವನ್ ಸೇರಿದಂತೆ ಕೆಲ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲದೇ, ಜಯಲಲಿತಾ ಸರ್ಕಾರದ ಮದ್ಯ ನೀತಿ ಖಂಡಿಸಿ, ಜನಪದ ಹಾಡುಗಳನ್ನು ಹಾಡಿದ್ದಾರೆ.
ಈ ಹಿನ್ನಲೆಯಲ್ಲಿ ಕೋವನ್ ಮತ್ತು 20 ಬೆಂಬಲಿಗರನ್ನು ಬಂಧಿಸಲಾಗಿದೆ. ಕೋವನ್ ವಿರುದ್ಧ ರಾಜದ್ರೋಹ, ಮಾನಹಾನಿ ಮತ್ತು ಶಾಂತಿ ಕದಡುವಿಕೆಯಡಿ ಪ್ರಕರಣ ದಾಖಲಿಸಲಾಗಿದೆ.