ರಾಹುಲ್ ಗಾಂಧಿಯನ್ನು ದೇಶದ್ರೋಹಿ ಎಂದ ಬಿಜೆಪಿ ಶಾಸಕ ಮನೆ ಮೇಲೆ ಮಸಿದಾಳಿ
ರಾಹುಲ್ ಗಾಂಧಿ ಅವರನ್ನು ದೇಶದ್ರೋಹಿ ಎಂದು ಕರೆದ ರಾಜಸ್ತಾನದ ಬಿಜೆಪಿ ಶಾಸಕ ಕೈಲಾಶ್ ಚೌಧರಿ ಮನೆಯ ಮೇಲೆ ರಾಹುಲ್ ಬೆಂಬಲಿಗರು ಮಸಿ...
ಜೈಪುರ್: ರಾಹುಲ್ ಗಾಂಧಿ ಅವರನ್ನು ದೇಶದ್ರೋಹಿ ಎಂದು ಕರೆದ ರಾಜಸ್ತಾನದ ಬಿಜೆಪಿ ಶಾಸಕ ಕೈಲಾಶ್ ಚೌಧರಿ ಮನೆಯ ಮೇಲೆ ರಾಹುಲ್ ಬೆಂಬಲಿಗರು ಮಸಿ ದಾಳಿ ನಡೆಸಿದ್ದಾರೆ.
ಶುಕ್ರವಾರ ಚೌಧರಿ ಮನೆಗೆ ದಾಳಿ ಮಾಡಿದ ಕಾಂಗ್ರೆಸ್ಸಿಗರು ಮನೆಗೆ ಮಸಿ ಎರಚಿ, ಶಾಸಕರ ನಾಮಫಲಕದಲ್ಲಿ ರಾಹುಲ್ ಗಾಂಧಿ ಜಿಂದಾಬಾದ್ ಎಂದು ಬರೆದಿದ್ದಾರೆ. ರಾಹುಲ್ ವಿರುದ್ಧ ಈ ರೀತಿಯ ಹೇಳಿಕೆ ನೀಡಿರುವ ಚೌಧರಿ ಅವರನ್ನು ಅಸೆಂಬ್ಲಿಯಿಂದ ವಜಾಗೊಳಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ಫೆ. 17ರಂದು ರೈತರನ್ನುದ್ದೇಶಿಸಿ ಮಾತನಾಡಿ ಚೌಧರಿ ಜೆಎನ್ಯು ನಲ್ಲಿ ದೇಶ ವಿರೋಧಿ ಪ್ರತಿಭಟನೆಗೆ ಸಾಥ್ ನೀಡುತ್ತಿರುವ ರಾಹುಲ್ ಗಾಂಧಿ ದೇಶದ್ರೋಹಿ ಎಂದು ಕರೆದಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.