ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಲೈಂಗಿಕ ಕಿರುಕಳ ಆರೋಪ: ಕ್ರಿಶ್ಚಿಯನ್ ಪಾದ್ರಿ ಬಂಧನ

ಬಾಲ ನಿವಾಸದಲ್ಲಿದ್ದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 38 ವರ್ಷದ ಕ್ರಿಶ್ಚಿಯನ್ ಪಾದ್ರಿಯನ್ನು...

ಸಾಂದರ್ಭಿಕ ಚಿತ್ರ
Mainashree
Updated On : 19 Feb 2016, 9:38 am
ಕೊಚ್ಚಿ: ಬಾಲ ನಿವಾಸದಲ್ಲಿದ್ದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 38 ವರ್ಷದ ಕ್ರಿಶ್ಚಿಯನ್ ಪಾದ್ರಿಯನ್ನು ಬಂಧಿಸಲಾಗಿದೆ.
ಪೆರಂಬವೂರ್ ಬಳಿ ಇರುವ ವಲಯಾಚಿರಂಗರ ಎಂಬಲ್ಲಿ ಮಲಂಕರ ಆರ್ಥಡಕ್ಸ್ ಸಿರಿಯಾನ್ ಚರ್ಚ್ ನಡೆಸುತ್ತಿದ್ದ ಬಾಲ ನಿವಾಸದ ಮ್ಯಾನೇಜರ್ ಆಗಿದ್ದ ಪ್ರೀಸ್ಟ್ ಜಾನ್ ಫಿಲಿಪೋಸ್ ಎಂಬುವವರು ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಾಲಕಿ ತನ್ನ ಶಾಲೆಯ ಹೆಡ್ ಮಾಸ್ಟರ್ ಬಳಿ ಪ್ರೀಸ್ಟ್ ಲೈಂಗಿಕ ಕಿರುಕುಳ ನೀಡುತ್ತಿರುವುದರ ಬಗ್ಗೆ ಹೇಳಿಕೊಂಡಿದ್ದಾಳೆ. ಆಗ ಶಾಲಾ ಆಡಳಿತ ಮಂಡಳಿ ಮಕ್ಕಳ ಸಹಾಯವಾಣಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 

Advertisement

Advertisement

ಅಧಿಕಾರಿಗಳು ಬಾಲಕಿಯನ್ನು ವಿಚಾರಿಸಿದಾಗ, ಪ್ರೀಸ್ಟ್ ಲೈಂಗಿಕ ಕಿರುಕುಳ ನೀಡಿರುವುದರ ಬಗ್ಗೆ ಮಾಹಿತಿ ನೀಡಿದ್ದಾಳೆ. ಬಾಲಕಿ ಹೇಳಿಕೆಯ ಮೇರೆಗೆ ಪ್ರೀಸ್ಟ್ ಅವರನ್ನು ಬಂಧಿಸಿದ್ದು, ಮಕ್ಕಳ ರಕ್ಷಣೆ ಮತ್ತು ಲೈಂಗಿಕ ಅಪರಾಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೆರಂಬವೂರ್ ಸಬ್ ಇನ್ಸ್ ಪೆಕ್ಟರ್ ಹನಿ ಕೆ ದಾಸ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments