ದೇಶ

10 ಗಂಟೆಗಳ ಕಾಲ 'ಮಹಾ' ಟ್ರಾಫಿಕ್ ಜಾಮ್!

Rashmi Kasaragodu
ಮುಂಬೈ: 10 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆದರೆ ಜನರ ಸ್ಥಿತಿ ಹೇಗಿರುತ್ತದೆ ಎಂದು ಊಹಿಸಿದ್ದೀರಾ? ಇಂಥಾ ಮಹಾ ಟ್ರಾಫಿಕ್ ಜಾಮ್ನ ಅನುಭವ ಮುಂಬೈ ಜನರಿಗೆ ಶನಿವಾರ ಆಗಿದೆ.  ಇಲ್ಲಿನ ಮುಂಬೈ -ಪುಣೆ ಎಕ್ಸ್ ಪ್ರೆಸ್ ವೇ ನಲ್ಲಿ ತೈಲ ಟ್ಯಾಂಕರ್ ಮಗುಚಿ ತೈಲ ಹೊರಚೆಲ್ಲಿದ್ದೇ ಈ ಟ್ರಾಫಿಕ್ ಜಾಮ್ ಗೆ ಕಾರಣ.
ಲೊನಾವಾಲಾ ಮತ್ತು ಖಂಡಾಲಾ ನಡುವಿನ ಎಕ್ಸ್ ಪ್ರೆಸ್ ವೇ ನಲ್ಲಿ ಬೆಳಗ್ಗೆ 6.30ಕ್ಕೆ ಈ ಘಟನೆ ನಡೆದಿತ್ತು. ತಿರುವಿನಲ್ಲಿ ಹಾದು ಹೋಗುತ್ತಿದ್ದ ಇನ್ನೊಂದು ವಾಹನ ಓವರ್ ಟೇಕ್  ಮಾಡಿದಾಗ ಟ್ಯಾಂಕರ್ ಲಾರಿ ಡ್ರೈವರ್ ಬ್ರೇಕ್ ಹಾಕಿದ್ದು, ಇದರಿಂದಾಗಿ ಎಣ್ಣೆ ಟ್ಯಾಂಕರ್ ಮಗಚಿತ್ತು. ಟ್ಯಾಂಕರ್ನಲ್ಲಿದ್ದ ಶೇ.75 ಎಣ್ಣೆ  ರಸ್ತೆಗೆ ಚೆಲ್ಲಿದ್ದು, ಈ ಎಣ್ಣೆಯ ಮೇಲೆ ಮರಳು ಹಾಕಿ ಮುಚ್ಚಲು ಟ್ರಾಫಿಕ್ ಪೊಲೀಸರಿಗೆ ಮೂರು ಗಂಟೆಯಿಂದ ಹೆಚ್ಚು ಕಾಲ ಬೇಕಾಗಿ ಬಂತು.
ಬೆಳಗ್ಗೆ 7.10 ಕ್ಕೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಎಣ್ಣೆಯ ಮೇಲೆ ಮರಳು ಹಾಕಿ ಮುಚ್ಚಿದ್ದಾರೆ. ಬೆಳಗ್ಗೆ 9.30ರ ವರೆಗೆ ಇದೇ ಕೆಲಸ ನಡೆದಿದೆ. ಈ ವೇಳೆ ಪುಣೆಯತ್ತ ವಿರುವ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಲಾಯಿತು. ಆದರೆ  ಜನರು ಬೇಗ ಹೋಗಲು ಪೈಪೋಟಿ ನಡೆಸಿದ್ದು ಸಂಚಾರ ದಟ್ಟಣೆ ನಿರ್ಮಾಣವಾಗುವಂತೆ ಮಾಡಿತು ಎಂದು ಹೈವೇ ಟ್ರಾಫಿಕ್ ಪೊಲೀಸರು ಹೇಳಿದ್ದಾರೆ. 
ಈ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಗಿ ಬಂತು. ವಾರಾಂತ್ಯವಾಗಿದ್ದ ಕಾರಣ ಲೊನಾವಲಾ ಮತ್ತು ಖಂಡಾಲದತ್ತ  ತೆರಳುವ ವಾಹನಗಳ ಸಂಖ್ಯೆ ಜಾಸ್ತಿಯೇ ಇತ್ತು. ಲಾರಿಯನ್ನು ತೆರವು ಗೊಳಿಸಿ, ಎಣ್ಣೆಯನ್ನು ಮರಳಿನಿಂದ ಮುಚ್ಚಿ ವಾಹನ ಸಂಚಾರ ಸುಗಮವಾಗುವಲ್ಲಿಯವರೆಗೆ ಸುಮಾರು 10 ಗಂಟೆಗಳ ಕಾಲ ವಾಹನಗಳು ತೆವಳುತ್ತಾ ರಸ್ತೆಯಲ್ಲೇ ಇರಬೇಕಾಗಿ ಬಂತು.
SCROLL FOR NEXT