ಜಾಟ್ ಬಿಸಿ: ಪರಿಸ್ಥಿತಿ ನಿಯಂತ್ರಣಕ್ಕೆ ತರಲು ರೋಹ್ಟಕ್'ಗೆ ಸಿಎಂ ಭೇಟಿ
ರೋಹ್ಟಕ್: ಹರಿಯಾಣದಲ್ಲಿ ಜಾಟ್ ಸಮುದಾಯದ ಪ್ರತಿಭಟನೆ ತಾರಕ್ಕೇರಿಸಿದ್ದು, ಇದೀಗ ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸ್ವತಃ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ರೋಹ್ಟಕ್ ಭೇಟಿ ನೀಡಲಿದ್ದಾರೆಂದು ಹೇಳಲಾಗುತ್ತಿದೆ.
ಸಿಎಂ ಖಟ್ಟರ್ ಅವರು ಹರಿಯಾಣ ರಾಜ್ಯ ಕೃಷಿ ಸಚಿವ ಒ.ಪಿ.ಧನ್ಕರ್, ರಾಜ್ಯ ಹಣಕಾಸು ಸಚಿವ ಕ್ಯಾಪ್ಟೆನ್ ಅಭಿಮನ್ಯು ಅವರ ಜೊತೆಗೂಡಿ ಇಂದು ರೊಹ್ಟಕ್ ಗೆ ಭೇಟಿ ನೀಡಿಲಿದ್ದಾರೆಂದು ಹೇಳಲಾಗುತ್ತಿದೆ.
ಪ್ರತಿಭಟನೆ ಸಂಬಂಧಿಸಿ ಮಾತನಾಡಿರುವ ಖಟ್ಟರ್ ಅವರು, ಜನರ ಆಗ್ರಹವನ್ನು ಕೇಳಲು ಸರ್ಕಾರ ತಯಾರಿದ್ದು, ಕಾನೂನು, ಸುವ್ಯವಸ್ಥೆಯನ್ನು ಕಾಪಾಡುವಂತೆ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ನಾಶಪಡಿಸುವುದರಿಂದ ಯಾರಿಗೂ ಲಾಭವಿಲ್ಲ. ಆಧಾರರಹಿತ ವದಂತಿಗಳನ್ನು ನಂಬಬೇಡಿ. ರಾಜ್ಯದಲ್ಲಿ ಶಾಂತಿಯನ್ನು ಕಾಪಡಿ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos