ದೇಶ

ಜಾರ್ಖಂಡ್: ಹಿರಿಯ ಸಹೋದ್ಯೋಗಿ ಮೇಲೆ ಸಿಆರ್ ಪಿಎಫ್ ಯೋಧನಿಂದ ಗುಂಡಿನ ದಾಳಿ

Lingaraj Badiger
ರಾಂಚಿ: ಸಿಆರ್ ಪಿಎಫ್ ಯೋಧನೊಬ್ಬ ತನ್ನ ಹಿರಿಯ ಸಹೋದ್ಯೋಗಿಯೊಬ್ಬರ ಮೇಲೆ ಗುಂಡಿನಿ ದಾಳಿ ಮಾಡಿ, ಬಳಿಕ ತಾನೂ ಶೂಟ್ ಮಾಡಿಕೊಂಡ ಘಟನೆ ಜಾರ್ಖಂಡ್ ನ ಲತೆಹರ್ ನಲ್ಲಿ ನಡೆದಿದೆ.
ಘಟನೆಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಮಧ್ಯಾಹ್ನ 12.30ರ ಸುಮಾರಿಗೆ ಲತೆಹರ್ ಕೋನ್ ಪ್ರದೇಶದ ಕೇಂದ್ರ ಮೀಸಲು ಪೊಲೀಸ್ ಪಡೆಯ ಕ್ಯಾಂಪ್ ನಲ್ಲಿ ಪೇದೆ ಮಹಿಪಾಲ್ ಹಾಗೂ ಮುಖ್ಯ ಪೇದೆ ಸಂಜಯ್ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ.
ಸಂಜಯ್ ಹಾಗೂ ಮಹಿಪಾಲ್ ನಡುವಿನ ಜಗಳ ತಾರಕಕ್ಕೇರಿ ಮಹಿಪಾಲ್ ಐಎನ್ಎಸ್ಎಎಸ್ ರೈಫಲ್ ನಿಂದ ಸಂಜಯ್ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ತಾನೂ ಶೂಟ್ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.
SCROLL FOR NEXT