ದೇಶ

ಭಾರತೀಯ ಶಾಸ್ತ್ರೀಯ ನೃತ್ಯ ಆತ್ಮವಿಶ್ವಾಸ ತುಂಬುತ್ತದೆ: ಅಧ್ಯಯನ ವರದಿ

Rashmi Kasaragodu
ಮುಂಬೈ: ಲೈಂಗಿಕ ಶೋಷಣೆಗೊಳಗಾದವರು ಮಾನಸಿಕ ಸಂಕಟದಿಂದ ಹೊರಬರಲು ಭಾರತೀಯ ಶಾಸ್ತ್ರೀಯ ನೃತ್ಯಗಳು ಸಹಾಯ ಮಾಡಬಲ್ಲವು ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಲೈಂಗಿಕ ಶೋಷಣೆಗೊಳಗಾದ ಕೊಲ್ಕತ್ತಾ ಮತ್ತು ಮುಂಬೈನಲ್ಲಿರುವ  50 ಮಹಿಳಾ ಸಂತ್ರಸ್ತರಿಗೆ ನೃತ್ಯ ಥೆರಪಿ ಮೂಲಕ ಬದಲಾವಣೆ ಕಂಡುಕೊಂಡಿದ್ದೇವೆ ಎಂದು ಅಧ್ಯಯನ ತಂಡ  ಹೇಳಿದೆ.
ಲೈಂಗಿಕ ಶೋಷಣೆಗೊಳಗಾದವರು ಆತಂಕ, ಖಿನ್ನತೆ, ಸಿಟ್ಟು ಹಾಗೂ ಒತ್ತಡದಿಂದ ಬಳಲುತ್ತಿದ್ದಾರೆ. ಅಂಥವರಿಗೆ ನೃತ್ಯ ಥೆರಪಿ ಮೂಲಕ ಆತ್ಮವಿಶ್ವಾಸ ತುಂಬಲಾಗುತ್ತದೆ. ಇಲ್ಲಿ ಹೆಚ್ಚಿನ ಸಂತ್ರಸ್ತರು ಮಾನವ ಸಾಗಾಣಿಕೆ, ಲೈಂಗಿಕ ಶೋಷಣೆಗೊಳಗಾದವರಾಗಿದ್ದಾರೆ. ಅವರು ದೈಹಿಕ ಮತ್ತು ಮಾನಸಿಕವಾಗಿ ಕುಗ್ಗಿರುವಾಗ ನೃತ್ಯ ಥೆರಪಿ ಮೂಲಕ ಅವರಿಗೆ ಆತ್ಮ ವಿಶ್ವಾಸ ತುಂಬಲಾಗುತ್ತದೆ ಎಂದು ಕೊಲ್ಕತ್ತಾ ಸಾನ್‌ವೆಡ್ ನ ಸಂಸ್ಥಾಪಕಿ ಮತ್ತು ನಿರ್ದೇಶಕಿ ಸೋಹಿನಿ ಚಕ್ರಬೊರ್ತಿ.
ನೃತ್ಯ ದೇಹಕ್ಕೆ ಸಂಬಂಧಿಸಿದ್ದು, ಅಷ್ಟೇ ಅಲ್ಲ ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ ನೃತ್ಯವನ್ನು ಅರಿತುಕೊಂಡಿರುತ್ತಾರೆ. ಸಂತ್ರಸ್ತರಿಗೆ ನೃತ್ಯ ಹೇಳಿ ಕೊಡುವ ಮೂಲಕ ಅವರಲ್ಲಿ ಪಾಸಿಟಿವ್ ಎನರ್ಜಿ ತುಂಬುವಂತೆ ಮಾಡಲಾಗುತ್ತದೆ ಅಂತಾರೆ ಸೋಹಿನಿ.
ನೃತ್ಯ ಥೆರಪಿಗೆ ಭಾರತೀಯ ಶಾಸ್ತ್ರೀಯ ನೃತ್ಯವೇ ಹೆಚ್ಚು ಒಪ್ಪುತ್ತದೆ. ಕಥಕ್ ಸಿಟ್ಟನ್ನು ಕಡಿಮೆ ಮಾಡುತ್ತದೆ. ಭರತನಾಟ್ಯದಲ್ಲಿನ ಕೈ  ಹಾಗೂ ಕಣ್ಣಿನ ಚಲನೆಗಳು ಭಾವನೆಗಳನ್ನು ವ್ಯಕ್ತಪಡಿಸಲು ಸಹಾಯ ಮಾಡುತ್ತವೆ. ಜಾನಪದ ನೃತ್ಯಗಳು ಆತ್ಮೀಯತೆಯನ್ನು ನೀಡುತ್ತೇವೆ.
ಈ ನೃತ್ಯಗಳ ಮೂಲಕ ಮಹಿಳೆಯರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ನೃತ್ಯ ಥೆರಪಿಯಿಂದ ಹಲವಾರು ಪ್ರಯೋಜನಗಳಿವೆ. ಆದಾಗ್ಯೂ, ಮಾನಸಿಕವಾಗಿ ಕುಗ್ಗಿ ಹೋಗಿರುವ ಲೈಂಗಿಕ ಶೋಷಿತರಿಗೆ ಇದರಿಂದಾಗಿ ಆತ್ಮವಿಶ್ವಾಸ ಹೆಚ್ಚುವುದಲ್ಲದೆ ಕಲೆಯ ಆರಾಧನೆಯೂ ಅರಿತಂತಾಗುತ್ತದೆ. ಈಗಾಗಲೇ ನೃತ್ಯ ಥೆರಪಿ ಹೇಗೆ ಉಪಯುಕ್ತವಾಗುತ್ತದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳೂ ಸಿಕ್ಕಿವೆ ಎಂದು ಸೋಹಿನಿ ಹೇಳಿದ್ದಾರೆ.
SCROLL FOR NEXT