ಯುದ್ಧದಲ್ಲಿ ಮಹಿಳೆಯರಿಗೆ ಅವಕಾಶ: ಮನೋಹರ್ ಪರಿಕ್ಕರ್ 
ದೇಶ

ಯುದ್ಧದಲ್ಲಿ ಮಹಿಳೆಯರಿಗೆ ಅವಕಾಶ: ಮನೋಹರ್ ಪರಿಕ್ಕರ್

ಸೇನಾ ಕಾರ್ಯಾಚರಣೆಯಲ್ಲಿ ಈ ಹಿಂದೆ ಮಹಿಳೆಯರ ನೇಮಕವನ್ನು ತಿರಸ್ಕರಿಸಿದ್ದ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಇದೀಗ ಮಹಿಳೆಯರ ನೇಮಕಾತಿಗೆ ಒಪ್ಪಿಗೆ ಸೂಚಿಸಿದ್ದು, ಯುದ್ಧ ಕಾರ್ಯಾಚಣೆಯಲ್ಲಿ ಪಾಲ್ಗೊಳ್ಳಲು...

ನವದೆಹಲಿ: ಸೇನಾ ಕಾರ್ಯಾಚರಣೆಯಲ್ಲಿ ಈ ಹಿಂದೆ ಮಹಿಳೆಯರ ನೇಮಕವನ್ನು ತಿರಸ್ಕರಿಸಿದ್ದ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಇದೀಗ ಮಹಿಳೆಯರ ನೇಮಕಾತಿಗೆ ಒಪ್ಪಿಗೆ ಸೂಚಿಸಿದ್ದು, ಯುದ್ಧ ಕಾರ್ಯಾಚಣೆಯಲ್ಲಿ ಪಾಲ್ಗೊಳ್ಳಲು ಮಹಿಳೆಯರಿಗೆ ಹಂತ ಹಂತವಾಗಿ ಅವಕಾಶಗಳನ್ನು ನೀಡಲಾಗುತ್ತದೆ ಎಂದು ಗುರುವಾರ ಹೇಳಿದ್ದಾರೆ.

ಈ ಕುರಿತಂತೆ ನಿನ್ನೆ ಮಾತನಾಡಿರುವ ಅವರು, ಮಹಿಳೆಯರಿಗೆ ನೀಡಬೇಕಿರುವ ತರಬೇತಿ ಹಾಗೂ ಸೌಕರ್ಯಗಳ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕಾಲಾನುಕ್ರಮಕ್ಕನುಗುಣವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಯುದ್ಧ ಸಂದರ್ಭದಲ್ಲಿ ಮಹಿಳೆಯರ ನೇಮಕ ವಿಚಾರದಲ್ಲಿ ಹಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಹಂತಹಂತವಾಗಿ ಮಹಿಳೆಯರಿಗೆ ಅವಕಾಶನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಮಂಗಳವಾರವಷ್ಟೇ ಬಜೆಟ್ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು, ಮುಂದಿನ ದಿನಗಳಲ್ಲಿ ಯುದ್ಧ ಕಾರ್ಯಾಚರಣೆಗಳಲ್ಲಿ ಮಹಿಳೆಯರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದರು. ಈ ಬೆನ್ನಲ್ಲೇ ಇದೀಗ ರಕ್ಷಣಾ ಸಚಿವರು ಕೂಡ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ: ಷರತ್ತು ಒಪ್ಪದ ಹೊರತು ಹಾರ್ಮುಜ್ ಜಲಸಂಧಿ ತರೆಯಲ್ಲ ಎಂದ ಇರಾನ್; ದಿಗ್ಬಂಧನ ಮತ್ತಷ್ಟು ಬಿಗಿಗೊಳಿಸಿದ ಅಮೆರಿಕ..!

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ: ‘ದೊಡ್ಡ ಘಟನೆ ನಡೆಯಲಿದೆ’ ಎಂದ ಟ್ರಂಪ್; ಇರಾನ್ ವಿರುದ್ಧ ಅಮೆರಿಕಾ ನಡೆಸಿರುವ ಗೇಮ್‌ಪ್ಲ್ಯಾನ್ ಏನು..?

ಇಂದಿನಿಂದ ವಿಧಾನಮಂಡಲ ವಿಶೇಷ ಅಧಿವೇಶನ: ಕಸ್ತೂರಿರಂಗನ್ ವರದಿ ತಿರಸ್ಕರಿಸಲು ಒಕ್ಕೊರಲ ತೀರ್ಮಾನ ಸಾಧ್ಯತೆ, ಕೇಂದ್ರಕ್ಕೆ ಶಾಕ್ ಕೊಡಲು ರಾಜ್ಯ ಸರ್ಕಾರ ಸಜ್ಜು..!

ಅಮೆರಿಕಾ ವಿರುದ್ಧ ಯುದ್ಧವಿಲ್ಲ, ಸೌದಿ ವಿರುದ್ಧ ಸಮರ ನಿಲ್ಲಲ್ಲ: ಟ್ರಂಪ್‌ಗೆ ಹೌತಿಗಳ ಖಡಕ್ ಸಂದೇಶ, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ಧದ ಆತಂಕ..!

ಕಸ್ತೂರಿರಂಗನ್ ವರದಿ ವಿರುದ್ಧ ರೈತರ ರಣಕಹಳೆ: 10 ಕಿ.ಮೀ. ನಡೆದು ಬಂದ ಸಾವಿರಾರು ಅನ್ನದಾತರು, ಸಿಎಂ ಭೇಟಿಗೆ ಪಟ್ಟು: ಬಿಸಿಲಲ್ಲೇ ಕುಳಿತು ಧರಣಿ..!