ಬಿಜೆಪಿಯೇತರ ರಾಜ್ಯಕ್ಕೆ ಕನ್ಹಯ್ಯ ಪ್ರಕರಣ ವರ್ಗಾಯಿಸಿ: ಕಾಂಗ್ರೆಸ್ 
ದೇಶ

ಬಿಜೆಪಿಯೇತರ ರಾಜ್ಯಕ್ಕೆ ಕನ್ಹಯ್ಯ ಪ್ರಕರಣ ವರ್ಗಾಯಿಸಿ: ಕಾಂಗ್ರೆಸ್

ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ ವಿವಾದಕ್ಕೆ ಸಂಬಂಧಿ ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಕನ್ಹಯ್ಯ ಕುಮಾರ್ ಪ್ರಕರಣವನ್ನು ಬಿಜೆಪಿಯೇತರ ರಾಜ್ಯಕ್ಕೆ ವರ್ಗಾಯಿಸುವಂತೆ ಕಾಂಗ್ರೆಸ್ ಶನಿವಾರ ಆಗ್ರಹಿಸಿದೆ...

ಲಖನೌ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ ವಿವಾದಕ್ಕೆ ಸಂಬಂಧಿ ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಕನ್ಹಯ್ಯ ಕುಮಾರ್ ಪ್ರಕರಣವನ್ನು ಬಿಜೆಪಿಯೇತರ ರಾಜ್ಯಕ್ಕೆ ವರ್ಗಾಯಿಸುವಂತೆ ಕಾಂಗ್ರೆಸ್ ಶನಿವಾರ ಆಗ್ರಹಿಸಿದೆ.

ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಅವರು, ಕನ್ಹಯ್ಯ ಪ್ರಕರಣ ಸಂಬಂಧ ದೆಹಲಿ ಪೊಲೀಸರು ನಡೆದುಕೊಳ್ಳುತ್ತಿರುವ ರೀತಿ ನಿಜಕ್ಕೂ ಅವಮಾನವಾದದ್ದು ಹಾಗೂ ದುರದೃಷ್ಟಕರವಾದದ್ದು. ಕನ್ಹಯ್ಯ ಪ್ರಕರಣವನ್ನ ಬಿಜೆಪಿಯೇತರ ಸರ್ಕಾರವಾಗಿರುವ ಉತ್ತರಪ್ರದೇಶ ಅಥವಾ ಬಿಹಾರಕ್ಕೆ ವರ್ಗಾಯಿಸಿ. ಇದರಿಂದ ಆತನಿಗೆ ಜಾಮೀನು ಸಿಗುತ್ತದೆ ಹಾಗೂ ಪ್ರಕರಣ ಸಂಬಂಧವಿರುವ ಸತ್ಯಾಸತ್ಯತೆಗಳು ಹೊರಬರುತ್ತದೆ ಎಂದು ಹೇಳಿದ್ದಾರೆ.

ಕನ್ಹಯ್ಯ ಕುಮಾರ್ ದೇಶ ವಿರೋಧ ಘೋಷಣೆಗಳನ್ನು ಕೂಗಿದ್ದಾನೆಂದು ಸುಳ್ಳು ಆರೋಪಗಳನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ, ಇದೀಗ ದಾಖಲೆಗಳಿಂದ ಆತನ ವಿರುದ್ಧ ತಪ್ಪು ಆರೋಪಗಳನ್ನು ಮಾಡಿರುವುದು ಬಹಿರಂಗವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT