ದೇಶ

ನೇಮಕಾತಿ ಹಗರಣ: ದಿಗ್ವಿಜಯ್ ಸಿಂಗ್​ಗೆ ಜಾಮೀನು

Srinivasamurthy VN

ಭೋಪಾಲ್: ಮಧ್ಯಪ್ರದೇಶ ವಿಧಾನಸಭೆ ಸಚಿವಾಲಯ ನೇಮಕಾತಿ ಅಕ್ರಮ ಹಗರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರಿಗೆ ಭೋಪಾಲ್ ನ್ಯಾಯಾಲಯವು ಶನಿವಾರ ಜಾಮೀನು ಮಂಜೂರು ಮಾಡಿದೆ.

ಹಗರಣ ಸಂಬಂಧ ಈ ಹಿಂದಿನ ವಿಚಾರಣೆಗೆ ದಿಗ್ವಿಜಯ್ ಸಿಂಗ್ ಗೈರು ಹಾಜರಾಗಿದ್ದ ಹಿನ್ನಲೆಯಲ್ಲಿ ನ್ಯಾಯಾಲಯ ಅವರ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ಈ  ಹಿನ್ನಲೆಯಲ್ಲಿ ದಿಗ್ವಿಜಯ್ ಸಿಂಗ್ ಅವರು ಇಂದು ಖುದ್ಧು ಹಾಜರಾಗಿದ್ದರು. ದಿಗ್ವಿಜಯ್ ಸಿಂಗ್ ಅವರೊಂದಿಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅರುಣ್ ಯಾದವ್, ಮಾಜಿ  ಕೇಂದ್ರ ಸಚಿವ ಸುರೇಶ್ ಪಚೌರಿ ಮತ್ತು ತಮ್ಮ ವಕೀಲ ವಿವೇಕ್ ತನ್ಖಾ ಅವರು ಕೂಡ ನ್ಯಾಯಾಲಯಕ್ಕೆ ಆಗಮಿಸಿದ್ದರು.

ಶುಕ್ರವಾರ ನಡೆದ ವಿಚಾರಣೆಯಲ್ಲಿ ಭೋಪಾಲ್ ನ್ಯಾಯಾಲಯವು ಇನ್ನುಳಿದ ಆರೋಪಿಗಳಾದ ಕೆ ಕೆ ಕೌಶಾಲ್, ಎ ಕೆ ಪ್ಯಾಸಿ ಅವರಿಗೆ ಷರತ್ತುಬದ್ದ ಜಾಮೀನು  ನೀಡಿತ್ತು. ನಿನ್ನೆ ಖುದ್ದು ಹಾಜರಾಗಿದ್ದ ಆರೋಪಿಗಳು ನ್ಯಾಯಾಲಯಕ್ಕೆ 30,000 ರು.ಗಳ ಭದ್ರತಾ ಖಾತರಿ ನೀಡಿ ಜಾಮೀನು ಪಡೆದಿದ್ದರು.

SCROLL FOR NEXT