ಮಹಿಳಾ ಪೇದೆ ಮೇಲೆ ಶಿವಸೇನೆ ಕಾರ್ಯಕರ್ತನಿಂದ ಹಲ್ಲೆ(ಸಂಗ್ರಹ ಚಿತ್ರ) 
ದೇಶ

ಮಹಿಳಾ ಪೊಲೀಸ್‌ ಮೇಲೆ ಮಾಜಿ ಶಿವಸೇನೆ ಕಾರ್ಯಕರ್ತನಿಂದ ಹಲ್ಲೆ, ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುತ್ತಿದ್ದ ಮಾಜಿ ಶಿವಸೇನೆ ಕಾರ್ಯಕರ್ತನನ್ನ ತಡೆದ ಮಹಿಳಾ ಟ್ರಾಫಿಕ್‌ ಪೊಲೀಸ್‌ ಮೇಲೆ ಹಲ್ಲೆ ಮಾಡಿರುವ ಘಟನೆ...

ಥಾಣೆ: ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುತ್ತಿದ್ದ ಮಾಜಿ ಶಿವಸೇನೆ ಕಾರ್ಯಕರ್ತನನ್ನ ತಡೆದ ಮಹಿಳಾ ಟ್ರಾಫಿಕ್‌  ಪೊಲೀಸ್‌ ಮೇಲೆ ಹಲ್ಲೆ ಮಾಡಿರುವ ಘಟನೆ ಥಾಣೆಯ ನಿತಿನ್ ಜಂಕ್ಷನ್ ನಲ್ಲಿ ನಡೆದಿದ್ದು, ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಿತಿನ್‌ ಜಂಕ್ಷನ್‌ ಸಮೀಪ ಕಳೆದ ಗುರುವಾರ ಆರೋಪಿ ಶಶಿಕಾಂತ್‌ ಕಾಲ್ಗುಡೆ(44) ಮೊಬೈಲ್‌ನಲ್ಲಿ ಮಾತನಾಡುತ್ತಾ ತಮ್ಮ  ಕಾರನ್ನು ಚಲಾಯಿಸಿದ್ದಾರೆ. ಈ ಸಂದರ್ಭ ಈಸ್ಟರ್ನ್ ಎಕ್ಸ್‌ಪ್ರೆಸ್‌  ಹೈವೇ ಫ್ಲೈ ಓವರ್ ಅಡಿಯಲ್ಲಿ ನಿಂತಿದ್ದ ಮಹಿಳಾ  ಕಾನ್‌ಸ್ಟೆಬಲ್‌ ವಾಹನ ನಿಲ್ಲಿಸುವಂತೆ ಸೂಚಿಸಿದರು. ಕಾನ್ ಸ್ಟೆಬಲ್ ಸೂಚನೆಯನ್ನು ಕಡೆಗಣಿಸಿದ ಕಾಲ್ಗುಡೆ ತನ್ನ ಕಾರನ್ನು ವೇಗವಾಗಿ ಚಲಾಯಿಸಲು ಮುಂದಾಗಿದ್ದಾನೆ. ಆದರೆ ಮಹಿಳಾ ಪೊಲೀಸ್‌ ಎದುರು ಬಂದಿದ್ದರಿಂದ ಕಾಲ್ಗುಡೆ ತನ್ನ ಎಸ್‌ಯುವಿಯನ್ನು ನಿಲ್ಲಿಸಿದ್ದಾನೆ.

ಕಾಲ್ಗುಡೆ ಯನ್ನು ಕಾನ್‌ಸ್ಟೆಬಲ್‌ ಡ್ರೈವಿಂಗ್‌ ಲೈಸೆನ್ಸ್‌ ಮತ್ತು ಇತರ ದಾಖಲೆಗಳನ್ನು ಕೇಳಿದಾಗ ಆಕೆಗೆ ನಿಂದಿಸಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯವಾದಿ ಪ್ರತೀಕ್ ಪವಾರ್ ಆತನನ್ನು ತಡೆದು ನೌಪಾಡಾ ಪೊಲೀಸ್ ಠಾಣೆಗೆ ಕರೆತಂದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಪೊಲೀಸರು ಕಿರುಕುಳ ಮತ್ತು ಹಲ್ಲೆ  ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್