ನವದೆಹಲಿ: ಹೈದರಾಬಾದ್ ವಿವಿಯ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಅವರ ಪ್ರಕರಣದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಂಸತ್ ನ್ನು ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಿರುವ ಜೆಡಿಯು, ಕಾಂಗ್ರೆಸ್, ಸ್ಮೃತಿ ಇರಾನಿ ವಿರುದ್ಧ ನಿಲುವಳಿ ಸೂಚನೆ ಮಂಡಿಸಲು ನಿರ್ಧರಿಸಿವೆ.
ಎಡಪಕ್ಷಳೂ ಸಹ ಸ್ಮೃತಿ ಇರಾನಿ ವಿರುದ್ಧ ನಿಲುವಳಿ ಸೂಚನೆ ಮಂಡಿಸುವುದಾಗಿ ಹೇಳಿಕೆ ನೀಡಿದೆ. ಸ್ಮೃತಿ ಇರಾನಿ ಸಂಸತ್ ಗೆ ನೀಡಿರುವ ಮಾಹಿತಿ ತಪ್ಪು ಎಂದು ರೋಹಿತ್ ವೆಮುಲಾ ಅವರ ಕುಟುಂಬ ಸದಸ್ಯರು ಹೇಳಿದ್ದಾರೆ, ಈ ಹಿನ್ನೆಲೆಯಲ್ಲಿ ಸಂಸತ್ ಗೆ ತಪ್ಪು ಮಾಹಿತಿ ನೀಡಿರುವ ಸ್ಮೃತಿ ಇರಾನಿ ವಿರುದ್ಧ ನಿಲುವಳಿ ಸೂಚನೆ ಮಂಡಿಸುವುದಾಗಿ ಕಾಂಗ್ರೆಸ್ ಹೇಳಿದೆ. ಫೆ.26 ರಂದು ಸುದ್ದಿಗೋಷ್ಠಿ ನಡೆಸಿದ್ದ ರೋಹಿತ್ ವೆಮುಲಾ ತಾಯಿ ರಾಧಿಕಾ ವೆಮುಲಾ, ರೋಹಿತ್ ಆತ್ಮಹತ್ಯೆಯ ಪ್ರಕರಣದ ಪರಿಸ್ಥಿತಿಗಳ ಬಗ್ಗೆ ಸ್ಮೃತಿ ಇರಾನಿ ಸಂಸತ್ ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದರು.