ನವದೆಹಲಿ: ಗೋವನ್ನು ದೇಶದ ಮಾತೆಯನ್ನಾಗಿ ಘೋಷಿಸಬೇಕು ಎಂದು ಭಾರತೀಯ ಗೋ ಕ್ರಾಂತಿ ಮಂಚ್ ಒತ್ತಾಯಿಸಿದೆ.
ಗೋವನ್ನು ದೇಶದ ಮಾತೆಯನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ದೇಶಾದ್ಯಂತ ಹಮ್ಮಿಕೊಂಡಿರುವ ಅಭಿಯಾನಕ್ಕೆ ಫೆ.28 ರಂದು ಚಾಲನೆ ನೀಡಿದೆ. ಗೋಪಾಲ್ ಮಣಿ ಮಹಾರಾಜ್ ಎಂಬುವವರು ಭಾರತೀಯ ಗೋ ಕ್ರಾಂತಿ ಮಂಚ್ ಸ್ಥಾಪನೆ ಮಾಡಿದ್ದು ಗೋವುಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ. ಗೋವನ್ನು ರಾಷ್ಟ್ರಪ್ರಾಣಿ ಎಂದು ಘೋಷಿಸಲು ಸಾಧ್ಯವಾಗಿಲ್ಲ, ಆದ್ದರಿಂದ ರಾಷ್ಟ್ರಮಾತೆಯನ್ನಾಗಿ ಘೋಷಿಸಬೇಕೆಂದು ಹಲವರು ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ ಎಂದು ಗೋಪಾಲ್ ಮಣಿ ಮಹಾರಾಜ್ ಹೇಳಿದ್ದಾರೆ.