ನವದೆಹಲಿ: ಕೇಂದ್ರೀಯ ಲೋಕಸೇವಾ ಆಯೋಗ(ಯುಪಿಎಸ್ ಸಿ) ದ ಹುದ್ದೆಗಳಿಗೆ ನಡೆಸಲಾಗುವ ದೈಹಿಕ ಪರೀಕ್ಷೆ ಮತ್ತು ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಇ-ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬೇಕಾಗಿದೆ.
ಯುಪಿಎಸ್ ಸಿ ಹುದ್ದೆಗಳ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಕಾಲ್ ಲೆಟರ್ ಫಾರ್ ಇಂಟರ್ವ್ಯೂ (ಕಾಗದ ಪತ್ರ) ನೀಡುವುದಿಲ್ಲ ಎಂದು ಯುಪಿಎಸ್ ಸಿ ಹೇಳಿದೆ. ಅದರ ಬದಲಾಗಿ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಲು ಇ-ಸಂದರ್ಶನ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಯುಪಿಎಸ್ ಸಿ ತಿಳಿಸಿದೆ.
ಮಾರ್ಚ್ 8ರಿಂದ ವ್ಯಕ್ತಿತ್ವ ಪರೀಕ್ಷೆ ನಡೆಯಲಿದೆ. ಈಗಾಗಲೇ ಮುಖ್ಯ ಪರೀಕ್ಷೆಯಿಂದ ಸಂದರ್ಶನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಸಂದರ್ಶನ ಪತ್ರವನ್ನು ಯುಪಿಎಸ್ ನ ವೆಬ್ ಸೈಟ್ "www.upsc.gov.in." ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಡೌನ್ ಲೋಡ್ ಮಾಡಿಕೊಳ್ಳಬೇಕಾದರೆ, ಏನಾದರೂ ಲೋಪಗಳು ಕಂಡುಬಂದಲ್ಲಿ ಸಂದರ್ಶನಕ್ಕೆ ಐದು ದಿನಗಳ ಮುಂಚೆಯೇ ಯುಪಿಎಸ್ ಕಚೇರಿಗೆ ತಿಳಿಸಿ ಸಮಸ್ಯೆ ಬಗೆಹರಿಸಕೊಳ್ಳಬೇಕು ಎಂದು ಯುಪಿಎಸ್ ಸಿ ಸೂಚಿಸಿದೆ.
ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆಗೆ ನೇಮಕಾತಿ ಬಯಸಿ ಪ್ರತಿ ವರ್ಷ ಮೂರು ಹಂತಗಳಲ್ಲಿ ಯುಪಿಎಸ್ ಸಿ ಪರೀಕ್ಷೆ ನಡೆಸುತ್ತದೆ. ಪೂರ್ವಭಾವಿ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಹೀಗೆ ಮೂರು ಹಂತಗಳಲ್ಲಿ ಇರುತ್ತದೆ.