ಹೊಸ ಜಾತಿಯ 'ಏಡಿ' ಪತ್ತೆ ಹಚ್ಚಿದ ಉದ್ಧವ್ ಠಾಕ್ರೆ ಪುತ್ರ: ಏಡಿಗೆ ಠಾಕ್ರೆ ಕುಟುಂಬದ ಹೆಸರು
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಯ ಎರಡನೇ ಪುತ್ರ ತೇಜಸ್ ಠಾಕ್ರೆ ಅವರು ಹೊಸ ಜಾತಿಯ ಏಡಿಯನ್ನು...
ಪುಣೆ: ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಯ ಎರಡನೇ ಪುತ್ರ ತೇಜಸ್ ಠಾಕ್ರೆ ಅವರು ಹೊಸ ಜಾತಿಯ ಏಡಿಯನ್ನು ಪತ್ತೆ ಹಚ್ಚಿದ್ದಾರೆ.
ಇಡೀ ಕುಟುಂಬ ರಾಜಕಾರಣದಲ್ಲಿ ತೊಡಗಿರಬೇಕಾದರೆ, ಎರಡನೇ ಪುತ್ರ ತೇಜಸ್ ಠಾಕ್ರೆ ದಟ್ಟ ಕಾಡಿನಲ್ಲಿ ಓಡಾಡುತ್ತಾ ಹೊಸ ಜಾತಿಯ ಏಡಿಯನ್ನು ಪತ್ತೆ ಹಚ್ಚಿದ್ದಾರೆ. ಇವರ ಸಾಧನೆಗೆ ಮೆಚ್ಚಿ ಹೊಸ ಜಾತಿಯ ಏಡಿಗೆ ಗುಬರ್ ನಟೊರಿಯಾನಾ ಠಾಕ್ರೆಯಿ ಎಂದು ನಾಮಕರಣ ಮಾಡಲಾಗಿದೆ.
ಮಹಾರಾಷ್ಟ್ರದ ಪಶ್ಚಿಮಘಟ್ಟದ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಸಂಶೋಧನೆ ನಡೆಸುತ್ತಿರುವ ತೇಜಸ್ ಇನ್ನಿಬ್ಬರು ವಿಜ್ಞಾನಿಗಳ ಸಹಕಾರದೊಂದಿಗೆ ಐದು ಹೊಸ ಜಾತಿಯ ಏಡಿಗಳನ್ನು ಪತ್ತೆ ಹಚ್ಚಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.