ಛತ್ತೀಸ್​ಗಢದಲ್ಲಿ ಮೂವರು ಯುವಕರನ್ನು ಅಪಹರಿಸಿದ ನಕ್ಸಲರು 
ದೇಶ

ಛತ್ತೀಸ್​ಗಢದಲ್ಲಿ ಮೂವರು ಯುವಕರನ್ನು ಅಪಹರಿಸಿದ ನಕ್ಸಲರು

ಶಾಂತಿ ಸಂದೇಶ ಸಾರಲು ಪುಣೆ ಮೂಲಕ ಸೈಕಲ್ ರ್ಯಾಲಿ ಕೈಗೊಂಡಿದ್ದ ಮೂವರು ಯುವಕರನ್ನು ಚತ್ತೀಸ್ ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಕ್ಸಲರು ಅಪಹರಿಸಿದ್ದಾರೆ.

ರಾಯ್ ಪುರ: ಶಾಂತಿ ಸಂದೇಶ ಸಾರಲು ಪುಣೆ ಮೂಲಕ ಸೈಕಲ್ ರ್ಯಾಲಿ ಕೈಗೊಂಡಿದ್ದ ಮೂವರು ಯುವಕರನ್ನು ಛತ್ತೀಸ್​ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಕ್ಸಲರು ಅಪಹರಿಸಿದ್ದಾರೆ.
ಮಹಾರಾಷ್ಟ್ರ- ಬಿಜಾಪುರ್ ಜಿಲ್ಲೆಯ ಗಡಿ ಪ್ರದೇಶದಲ್ಲಿರುವ ಮಹಾರಾಷ್ಟ್ರ ಗಡಿಯ ಬಿಜಾಪುರ ವಲಯದ ಬಸಗುಡ ಅರಣ್ಯದಿಂದ ವಿದ್ಯಾರ್ಥಿಗಳನ್ನು ಅಪಹರಿಸಲಾಗಿದೆ ಎಂಬ ಮಾಹಿತಿ ಇದೆ.  ಕೆಲ ದಿನಗಳ ಹಿಂದೆ ಕುತ್ರುವಿನಲ್ಲಿ ಅವರು ಸ್ಥಳೀಯರಿಗೆ ಕಡೆಯದಾಗಿ ಕಾಣಲು ಸಿಕ್ಕಿದ್ದರು ಎಂದು ಬಸ್ತಾರ್ ವಲಯದ ಐಜಿಪಿ ಎಸ್​ಆರ್​ಪಿ ಕಲ್ಲೂರಿ ಹೇಳಿದರು. ಡಿ.20 ರಂದು ಸೈಕಲ್ ರ್ಯಾಲಿ ಪ್ರಾರಂಭಿಸಿದ್ದ ಯುವಕರು ಕೆಲ ದಿನಗಳ ಹಿಂದೆ ಕುತ್ರುವಿನಲ್ಲಿ ಅವರು ಸ್ಥಳೀಯರಿಗೆ ಕಡೆಯದಾಗಿ ಕಾಣಲು ಸಿಕ್ಕಿದ್ದರು ಎಂದು ಬಸ್ತಾರ್ ವಲಯದ ಐಜಿಪಿ ಎಸ್​ಆರ್​ಪಿ ಕಲ್ಲೂರಿ ಹೇಳಿದ್ದಾರೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಈ ವಿದ್ಯಾರ್ಥಿಗಳನ್ನು ಆದರ್ಶ ಪಾಟೀಲ್, ವಿಲಾ ವಲಕೆ ಮತ್ತು ಶ್ರೀಕಿರ್ಹನ ಶೆಲವಲೆ ಎಂಬುದಾಗಿ ಗುರುತಿಸಲಾಗಿದೆ. ‘ಭಾರತ್ ಜೋಡೋ’ ಕಾರ್ಯಕ್ರಮದ ಅಂಗವಾಗಿ ಈ ವಿದ್ಯಾರ್ಥಿಗಳ ಸೈಕಲ್ ಯಾತ್ರೆ ಹೊರಟಿದ್ದರು.
ಇತ್ತೀಚಿನ ವರದಿಗಳ ಪ್ರಕಾರ  ಛತ್ತೀಸ್​ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲೀಯರಿಂದ ಅಪಹರಣಗೊಂಡಿದ್ದ ಪುಣೆಯ ಮೂವರು ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ