ತಮಿಳುನಾಡು: ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರ ಸಲಹೆಯಂತೆ ತನ್ನ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಿಯನ್ನೇ ವಿವಾಹವಾಗಲು ತಮಿಳುನಾಡಿನ ಕಡಲೂರು ಗ್ರಾಮದ ಯುವತಿ ನಿರ್ಧರಿಸಿದ್ದಾಳೆ.
ತನ್ನ ಮಗುವಿನ ಮುಂದಿನ ಭವಿಷ್ಯದ ಹಿತದೃಷ್ಠಿಯಿಂದ ತಾನು ಅತ್ಯಾಚಾರಿಯನ್ನೇ ಮದುವೆಯಾಗಲು ನಿರ್ಧರಿಸಿರುವುದಾಗಿ ಸಂತ್ರಸ್ತ ಯುವತಿ ಹೇಳಿದ್ದಾಳೆ. ಸುದೀರ್ಘವಾದ ಕಾನೂನು ಹೋರಾಟ ಮಾಡಲು ತನ್ನಿಂದ ಸಾಧ್ಯವಿಲ್ಲ. ಹೀಗಾಗಿ ದೂರನ್ನು ವಾಪಸ್ ಪಡೆದು ಆತನ ಜೊತೆ ವಿವಾಹವಾಗಲು ನಿಶ್ಚಯಿಸಿದ್ದಾಳೆ.
ಕಳೆದ ವರ್ಷ ಜೂನ್ 23 ರಂದು ಮದ್ರಾಸ್ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶ ಪಿ.ದೇವದಾಸ್ ಆಕೆಯ ಭವಿಷ್ಯದ ಹಿತ ದೃಷ್ಟಿಯಿಂದ ಅತ್ಯಾಚಾರಿಯನ್ನೇ ವಿವಾಹವಾಗುವಂತೆ ಸೂಚಿಸಿದ್ದರು. ಆದರೆ ಇದಕ್ಕೆ ಸಂತ್ರಸ್ತ ಯುವತಿ ಈ ಸಲಹೆಯನ್ನು ತಿರಸ್ಕರಿಸಿದ್ದಳು. ಈಗ ನ್ಯಾಯಾಧೀಶರ ಸಲಹೆಯಂತೆ ಅತ್ಯಾಚಾರ ಆರೋಪಿಯನ್ನೇ ವರಿಸಲು ನಿರ್ಧರಿಸಿರುವ ಯುವತಿ ಕೇಸ್ ವಾಪಸ್ ಪಡೆಯಲು ತೀರ್ಮಾನಿಸಿದ್ದಾಳೆ.