ಗುಲಾಂ ಅಲಿ 
ದೇಶ

ಕೇರಳದಲ್ಲಿ ಗುಲಾಂ ಅಲಿ ಸಂಗೀತ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ

ಪಠಾಣ್‌ಕೋಟ್ ಉಗ್ರದಾಳಿ ಹಿನ್ನಲೆಯಲ್ಲಿ ಪಾಕಿಸ್ತಾನಿ ಗಾಯಕ ಗುಲಾಂ ಅಲಿ ಅವರು ಕೇರಳದಲ್ಲಿ ನಡೆಸಲುದ್ದೇಶಿಸುತ್ತಿರುವ ಗಜಲ್ ಸಂಗೀತ ...

ತಿರುವನಂತಪುರಂ: ಪಠಾಣ್‌ಕೋಟ್ ಉಗ್ರದಾಳಿ ಹಿನ್ನಲೆಯಲ್ಲಿ ಪಾಕಿಸ್ತಾನಿ ಗಾಯಕ ಗುಲಾಂ ಅಲಿ ಅವರು ಕೇರಳದಲ್ಲಿ ನಡೆಸಲುದ್ದೇಶಿಸುತ್ತಿರುವ ಗಜಲ್ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಲು ಶಿವಸೇನೆ ಆದೇಶಿಸಿದೆ. 
ಜನವರಿ 14 ಕ್ಕೆ ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಮತ್ತು 17 ರಂದು ಕೋಝಿಕ್ಕೋಡ್‌ನಲ್ಲಿಯೂ ಗುಲಾಂ ಅಲಿ ಕಾರ್ಯಕ್ರಮ ನಿಗದಿಯಾಗಿದೆ. ಒಂದು ವೇಳೆ ಕಾರ್ಯಕ್ರಮ ನಡೆದರೆ, ಕಾರ್ಯಕ್ರಮದ ವೇಳೆ ನಮ್ಮ ಕಾರ್ಯಕರ್ತರು ವೇದಿಕೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಶಿವಸೇನೆ ಬೆದರಿಕೆ ನೀಡಿದೆ.
75ರ ಹರೆಯದ ಖ್ಯಾತ ಗಜಲ್ ಗಾಯಕ ಗುಲಾಂ ಅಲಿ ಜನವರಿ 14 ರಂದು ಕೇರಳಕ್ಕೆ ಆಗಮಿಸಲಿದ್ದಾರೆ. ಕೇರಳದ ಸಾಮಾಜಿಕ ಸಾಂಸ್ಕೃತಿಕ ಸಂಘಟನೆಯಾದ ಸ್ವರಲಯ ಗುಲಾಂ ಗಜಲ್ ಕಾರ್ಯಕ್ರಮದ ಆಯೋಜಕರಾಗಿದ್ದಾರೆ.
ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಉಗ್ರ ದಾಳಿಯಾಗಿ ದೇಶಕ್ಕೆ ದೇಶವೇ ಸೂಕತದ ಛಾಯೆಯಲ್ಲಿರುವಾಗ ಸಂಗೀತ ಕಾರ್ಯಕ್ರಮ ನಡೆಸುವುದು ಸರಿಯಲ್ಲ ಎಂದು ಶಿವಸೇನೆಯ ರಾಜ್ಯ ಸಂಘಟನೆಯ ಸದಸ್ಯ ಪಿ. ಅಜಿ ಹೇಳಿದ್ದಾರೆ.
ನಾವು ಕಲೆ ವಿರುದ್ಧವಲ್ಲ, ನಾವು ಪಾಕಿಸ್ತಾನದ ವಿರುದ್ಧ ಈ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಅಜಿ ಹೇಳಿದ್ದಾರೆ.
ಅದೇ ವೇಳೆ ಅಲಿ ಅವರನ್ನು ಸ್ವಾಗತಿಸಲು ಕಾರ್ಯಕ್ರಮ ಹಮ್ಮಿಕೊಳ್ಳುವ ಬದಲು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಉಗ್ರ ದಾಳಿಯಲ್ಲಿ ಮಡಿದ ಹುತಾತ್ಮರಿಗೆ ಗೌರವ ಸಲ್ಲಿಸಲಿ ಎಂದು ಶಿವಸೇನೆ ಸಲಹೆ ನೀಡಿದೆ. 
ಜನವರಿ 15 ಮತ್ತು 17 ರಂದು ಶಿವಸೇನೆ ಕೇರಳದಾದ್ಯಂತ ಪ್ರತಿಭಟನಾ ದಿನವನ್ನು ಆಚರಿಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

SCROLL FOR NEXT