ನವದೆಹಲಿ: ತತ್ವಜ್ಞಾನಿ, ಸಂತ ಸ್ವಾಮಿ ವಿವೇಕಾನಂದರ ೧೫೩ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಗೌರವ ಸಲ್ಲಿಸಿದ್ದಾರೆ.
"ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರಿಗೆ ತಲೆ ಬಾಗುತ್ತೇನೆ" ಎಂದು ಮೋದಿ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಶ್ವಕ್ಕೆ ಯೋಗ, ಶಾಂತಿ ಮತ್ತು ಹಿಂದು ಧರ್ಮದ ಒಳಿತನ್ನು ಪ್ರಚಾರ ಮಾಡಿದ ಹಿಂದು ಸನ್ಯಾಸಿ ಸ್ವಾಮಿ ವಿವೇಕಾನಂದ ೧೮೬೩ ಜನವರಿ ೧೨ ರಂದು ಜನಿಸಿದ್ದರು.