ಸಾಂದರ್ಭಿಕ ಚಿತ್ರ 
ದೇಶ

400 ಜಡ್ಜ್ ಗಳ ನೇಮಕಕ್ಕೆ ಕೊಲಿಜಿಯಂ ಸಜ್ಜು

ಎನ್‍ಡಿಎ ಸರ್ಕಾರದ ನ್ಯಾಯಾಂಗ ನೇಮಕ ಆಯೋಗವನ್ನು ರದ್ದು ಮಾಡಿದ 3 ತಿಂಗಳ ಬಳಿಕ, ಈಗ ಖಾಲಿ ಹುದ್ದೆಗಳನ್ನು...

ನವದೆಹಲಿ: ಎನ್‍ಡಿಎ ಸರ್ಕಾರದ ನ್ಯಾಯಾಂಗ ನೇಮಕ ಆಯೋಗವನ್ನು ರದ್ದು ಮಾಡಿದ 3 ತಿಂಗಳ ಬಳಿಕ, ಈಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವತ್ತ ಕೊಲೀಜಿಯಂ ಹೆಜ್ಜೆಯಿಟ್ಟಿದೆ. ಅದರಂತೆ, ಸಿಜೆಐ ನೇತೃತ್ವದ ಕೊಲೀಜಿಯಂ ಸುಪ್ರೀಂ ಕೋರ್ಟ್‍ನಲ್ಲಿ 5 ಹಾಗೂ ಹೈಕೋಟ್ರ್ ಗಳ 400 ಹುದ್ದೆಗಳನ್ನು ಭರ್ತಿ ಮಾಡಲಿದೆ. 
2014ರ ಅಂತ್ಯದಿಂದ ಅಂದರೆ ಎನ್‍ಡಿಎ ಸರ್ಕಾರವು ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ(ಎನ್ ಜೆಎಸಿ) ರಚಿಸಲು ಸಿದ್ಧತೆ ನಡೆಸಿದಾಗಿನಿಂದ ಉನ್ನತ ನ್ಯಾಯಾಂಗಕ್ಕೆ ಯಾವುದೇ ನೇಮಕ ಪ್ರಕ್ರಿಯೆ ನಡೆದಿರಲಿಲ್ಲ. ಜಡ್ಜ್ ಗಳ ಆಯ್ಕೆ ಮತ್ತು ನೇಮಕದಲ್ಲಿ ಕಾರ್ಯಾಂಗಕ್ಕೆ ಹೆಚ್ಚಿನ ಅಧಿಕಾರ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಎನ್‍ಜೆಎಸಿ ತರಲು ಮುಂದಾಗಿತ್ತು. 
ಆದರೆ, ಇದನ್ನು ಅಸಾಂವಿಧಾನಿಕ ಎಂದು ಘೋಷಿಸಿದ ಸುಪ್ರೀಂ ಕೋರ್ಟ್, ಎನ್ ಜಿಎಸಿಯನ್ನೇ ರದ್ದು ಮಾಡಿ ಆದೇಶ ಹೊರಡಿಸಿತ್ತು. ಕಳೆದ ವಾರ ಐವರು ಸದಸ್ಯರ ಕೊಲೀಜಿಯಂ(ಮುಖ್ಯ ನ್ಯಾಯಾ ಮೂರ್ತಿ ಟಿ ಎಸ್ ಠಾಕೂರ್, ನ್ಯಾಯಮೂರ್ತಿಗಳಾದ ಎ ಆರ್ ದವೆ, ಜೆ ಎಸ್ ಖೆಹರ್, ದೀಪಕ್ ಮಿಶ್ರಾ ಮತ್ತು ಜೆ ಚಲಮೇಶ್ವರ್) ಸಭೆ ಸೇರಿತ್ತು. 
ಈ ವೇಳೆ, ಕೇಂದ್ರ ಸರ್ಕಾರವು ನ್ಯಾಯಾಧೀಶರ ಅರ್ಹತಾ ಮಾನದಂಡ ನಿರ್ಧರಿಸುವಂತಹ ಹೊಸ ಮೆಮೊರಂಡಂ ಆಫ್  ಪ್ರೊಸೀಜರ್(ಎಂಒಪಿ) ಅನ್ನು ಸಿದ್ಧಪಡಿಸುವವರೆಗೆ ಕಾಯದೇ, ನ್ಯಾಯಾಧೀಶರ ನೇಮಕ ಪ್ರಕ್ರಿಯೆ ಆರಂಭಿಸೋಣ ಎಂಬ ನಿರ್ಧಾರಕ್ಕೆ ಬರಲಾಯಿತು. ಜತೆಗೆ, ನೇಮಕ ವಿಳಂಬದಿಂದಾಗಿ ಹಲವು ಕೇಸುಗಳು ಇತ್ಯರ್ಥವಾಗಲೇ ಉಲಿದಿರುವುದನ್ನೂ ಪರಿಗಣಿಸಿ ಹೈಕೋರ್ಟ್‍ಗಳಿಗೆ 400 ಮತ್ತು ಸುಪ್ರೀಂಗೆ ಐವರು ನ್ಯಾಯಾಧೀಶರನ್ನು ನೇಮಕ ಮಾಡಲು ನಿರ್ಧರಿಸಲಾಯಿತು ಎಂದು ``ಹಿಂದುಸ್ಥಾನ್ ಟೈಮ್ಸ್''ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!