ಸಲ್ವಿಂದರ್ ಸಿಂಗ್‌ 
ದೇಶ

ಪಠಾಣ್‌ಕೋಟ್ ಉಗ್ರ ದಾಳಿಗೂ ಗುರುದಾಸ್‌ಪುರ ಎಸ್ಪಿಗೂ ಸಂಬಂಧವಿಲ್ಲ?

ಪಠಾಣ್‌ಕೋಟ್ ವಾಯುನೆಲೆಯಲ್ಲಿ ನಡೆದ ಉಗ್ರ ದಾಳಿಗೂ ಗುರುದಾಸ್‌ಪುರ ಎಸ್ಪಿ ಹೇಳಿರುವ ಅಪಹರಣ ಕತೆಗೂ ನಂಟಿದೆ ಎಂಬ ರೀತಿಯಲ್ಲಿಯೇ ಇಲ್ಲಿಯವರೆಗೆ...

ನವದೆಹಲಿ: ಪಠಾಣ್‌ಕೋಟ್ ವಾಯುನೆಲೆಯಲ್ಲಿ ನಡೆದ ಉಗ್ರ ದಾಳಿಗೂ ಗುರುದಾಸ್‌ಪುರ ಎಸ್ಪಿ ಹೇಳಿರುವ ಅಪಹರಣ ಕತೆಗೂ ನಂಟಿದೆ ಎಂಬ ರೀತಿಯಲ್ಲಿಯೇ ಇಲ್ಲಿಯವರೆಗೆ ವರದಿಗಳು ಬಂದಿದ್ದವು. ಆದರೆ ಗುರುದಾಸ್‌ಪುರ ಎಸ್ಪಿ ಸಲ್ವಿಂದರ್ ಸಿಂಗ್‌ಗೂ ಈ ಉಗ್ರದಾಳಿ ನಡುವೆ ಯಾವುದೇ ಸಂಬಂಧವಿಲ್ಲ ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ.
ಆದಾಗ್ಯೂ, ರಾಷ್ಟ್ರೀಯ ತನಿಖಾ ದಳ ಸಲ್ವಿಂದರ್ ಸಿಂಗ್ ಅವರಿಗೆ ಕ್ಲೀನ್‌ಚಿಟ್ ಏನೂ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಉಗ್ರರು ದಾಳಿ ಮಾಡುವ ಮುನ್ನ ತನ್ನನ್ನು ಅಪಹರಣಕ್ಕೆ ಯತ್ನಿಸಲಾಯಿತು ಎಂದು ಗುರುದಾಸ್‌ಪುರ್ ಎಸ್ಪಿ ಸಲ್ವಿಂದರ್ ಸಿಂಗ್ ದೂರಿದ್ದರು. 
ಆದರೆ ಎಸ್ಪಿ ಆ ಘಟನೆಯನ್ನು ವಿವರಿಸಿದ ರೀತಿ ಹಾಗೂ ಆ ಹೊತ್ತಲ್ಲಿ ಅವರೊಂದಿಗೆ ಇದ್ದ ಸ್ನೇಹಿತರು ನೀಡಿರುವ ಹೇಳಿಕೆಗಳಲ್ಲಿ ವೈರುಧ್ಯ ಕಂಡು ಬಂದಿತ್ತು. ಈ ನಿಟ್ಟಿನಲ್ಲಿ ಗುರುದಾಸ್‌ಪುರ ಎಸ್ಪಿಯನ್ನು ರಾಷ್ಟ್ರೀಯ ತನಿಖಾ ದಳ ವಿಚಾರಣೆಗೊಳಪಡಿಸಿತ್ತು.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಇಲ್ಲ ಪರಿಣಾಮ ಎದುರಿಸಬೇಕಾಗುತ್ತದೆ: ಕಾಂಗ್ರೆಸ್ ಗೆ 'ಅಹಿಂದ' ಎಚ್ಚರಿಕೆ

ಮಮತಾಗೆ ಮತ್ತೊಂದು ಶಾಕ್; ಪಕ್ಷದ ಎಲ್ಲಾ ಹುದ್ದೆಗಳಿಗೆ ಸಂಸದೆ ಕಾಕೋಲಿ ಘೋಷ್ ರಾಜೀನಾಮೆ

ಮಮತಾಗೆ ಬಿಗ್ ಶಾಕ್; TMC ವಿಭಜನೆ? ತೃಣಮೂಲ ಕಾಂಗ್ರೆಸ್ ನ 50 ಶಾಸಕರು, 20 ಸಂಸದರು ಬಿಜೆಪಿ ಸೇರ್ಪಡೆ?

KPCC ಮೇಜರ್ ಸರ್ಜರಿ: ನಟಿ ಭಾವನಾ, ನಿಕೇತ್ ರಾಜ್ ಮೌರ್ಯ ಸೇರಿ 31 ಪದಾಧಿಕಾರಿಗಳಿಗೆ ಗೇಟ್‌ಪಾಸ್‌!

SCROLL FOR NEXT