ದೇಶ

ಆರ್‍ಕಾಂ, ಜಿಯೋ ಸ್ಪೆಕ್ಟ್ರಂ ಹಂಚಿಕೆ ಒಪ್ಪಂದ

Srinivasamurthy VN

ನವದೆಹಲಿ: ಸ್ಪೆಕ್ಟ್ರಂ ವಹಿವಾಟು ಮತ್ತು ವರ್ಗಾವಣೆ ಒಪ್ಪಂದಕ್ಕೆ ರಿಲಯನ್ಸ್ ಕಮ್ಯೂನಿ ಕೇಷನ್ಸ್ (ಆರ್‍ಕಾಂ) ಮತ್ತು ರಿಲಯನ್ಸ್ ಜಿಯೋ ಇನ್ಫೋಕಾಂ (ಆರ್‍ಜೆಐಎಲ್) ಮುಂದಿನ ವಾರ ಸಹಿ  ಮಾಡುವ ಸಾಧ್ಯತೆಗಳಿವೆ.

ಆರ್‍ಕಾಂನಿಂದ ದೇಶದ 12 ವೃತ್ತಗಳಲ್ಲಿ 800-850 ಮೆಗಾಹಟ್ರ್ಸ್ ಸ್ಪೆಕ್ಟ್ರಂ ಖರೀದಿಗೆ ಆರ್‍ಜೆಐಎಲ್ ರು.4,500 ಕೋಟಿ ಪಾವತಿಸಲಿದೆ ಎಂದು ಮೂಲಗಳು ಹೇಳಿವೆ. ಒಪ್ಪಂದದ ನಂತರ ಆರ್‍ಕಾಂ  ಹಣವನ್ನು ದೂರಸಂಪರ್ಕ ಇಲಾಖೆಗೆ ಪಾವತಿಸಿ ಸ್ಪೆಕ್ಟ್ರಂ ಪಡೆಯಲಿದೆ. ನಂತರ ಎರಡೂ ಕಂಪನಿಗಳು ದೇಶದ 22 ವೃತ್ತಗಳಲ್ಲಿಯೂ ಸ್ಪೆಕ್ಟ್ರಂನ್ನು ಹಂಚಿಕೊಳ್ಳಲಿವೆ. 16 ವೃತ್ತಗಳಲ್ಲಿ ಸ್ಪೆಕ್ಟ್ರಂ ಬಿಡುಗಡೆಗೆ ರು.5,600 ಕೋಟಿ ಪಾವತಿಸಬೇಕೆಂದು ಡಿಒಟಿ ಆರ್‍ಕಾಂಗೆ ನೋಟಿಸ್ ಮಾಡಿದೆ.

SCROLL FOR NEXT