ವಾಷಿಂಗ್ಟನ್: ಭಾರತದ ಆಧಾರ್ ಯೋಜನೆಯನ್ನು ವಿಶ್ವಬ್ಯಾಂಕ್ ಶ್ಲಾಘಿಸಿದೆ. ಇದರಿಂದ ಭಾರತಕ್ಕೆ ವಾರ್ಷಿಕ ರು.6,500 ಉಳಿತಾಯವಾಗಲಿದೆ ಎಂದು ಹೇಳಿದೆ.
ಸರ್ಕಾರದ ವಿವಿಧ ಸಹಾಯಧನ ಯೋಜನೆಗಳಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಿದ್ದರಿಂದ ಹಣ ಸೋರಿಕೆಗೆ ತಡೆಬಿದ್ದಿದೆ. ಇದರಿಂದ ವಾರ್ಷಿಕ 65೦೦ ಕೋಟಿ ರೂ. ಉಳಿತಾಯವಾಗಿದೆ ಮತ್ತು ಡಿಜಿಟಲೀಕರಣದಿಂದ ಭ್ರಷ್ಟಾಚಾರ ನಿಯಂತ್ರಣ, ಒಳಗೊಳ್ಳುವಿಕೆ, ಫಲಶೃತಿ ಹೆಚ್ಚಲಿದೆ ಎಂದು ವಿಶ್ವಬ್ಯಾಂಕ್‌ನ ಡಿಜಿಟಲ್ ಡಿವಿಡೆಂಡ್ಸ್ ವರದಿಯಲ್ಲಿ ಹೇಳಲಾಗಿದೆ.
ಪ್ರಸ್ತುತ 100 ಕೋಟಿ ಜನರಿಗೆ ಆಧಾರ್‌ಕಾರ್ಡ್ ವಿತರಿಸಲಾಗಿದೆ. ಶೀಘ್ರದಲ್ಲೇ ದೇಶದ 120 ಕೋಟಿ ಜನರಿಗೂ ಆಧಾರ್ ಕಾರ್ಡ್ ತಲುಪಿಸಲಾಗುತ್ತಿದೆ. ಇದರಿಂದ ಸರ್ಕಾರಿ ಸೇವೆಗಳಿಂದ ದೂರ ಉಳಿದ ಕುಟುಂಬಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ನೆರವಾಗಲಿದೆ ಎಂದು ವಿಶ್ವ ಬ್ಯಾಂಕ್ ತಯಾರಿಸಿದ ಡಿಜಿಟಲ್ ಡಿವಿಡೆಂಡ್ಸ್ ವರದಿ ಬಿಡುಗಡೆ ವೇಳೆ ವಿಶ್ವಬ್ಯಾಂಕ್‌ನ ಮುಖ್ಯ ಹಣಕಾಸು ತಜ್ಞ ಕೌಶಿಕ್ ಬಸು ಹೇಳಿದ್ದಾರೆ.
ಇತರ ದೇಶಗಳಿಗೂ ಆಧಾರ್ ಮಾದರಿ: ಈ ಯೋಜನೆ ಇತರ ದೇಶಗಳಿಗೂ ಮಾದರಿಯಾಗಿದೆ. 5 ವರ್ಷಗಳಲ್ಲಿ 1೦೦ ಕೋಟಿ ಜನರಿಗೆ ಭಾರತವು ಆಧಾರ್ ಕಾರ್ಡನ್ನು ನೀಡುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಸಾಧ್ಯವಾದರೆ ಯಾಕೆ ಇತರ ದೇಶಗಳೂ ಇದನ್ನು ಅನುಸರಿಸಬಾರದು ಎಂದು ವಿಶ್ವಬ್ಯಾಂಕ್‌ನ ಡಿಜಿಟಲ್ ಡಿವಿಡೆಂಡ್ಸ್ ವರದಿಯಲ್ಲಿ ಪ್ರಶ್ನಿಸಲಾಗಿದೆ.
ಅಲ್ಲದೆ ಪಶ್ಚಿಮ ಆಫ್ರಿಕಾದ ಶೇ.4೦ರಷ್ಟು ಜನರು ಬಿಲ್ ಪಾವತಿಗಳನ್ನು ಮೊಬೈಲ್ ಮೂಲಕ ಮಾಡುತ್ತಾರೆ. ಹಾಗೆಯೇ 8೦ ಲಕ್ಷ ಸಣ್ಣ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಮಾರಲು ಇ-ಕಾಮರ್ಸ್ ವೇದಿಕೆ ಯನ್ನು ಬಳಸಿಕೊಳ್ಳುತ್ತಿದ್ದಾರೆ. 12೦ ದೇಶಗಳಿಗೆ ಅವರು ಉತ್ಪನ್ನಗಳನ್ನು ರಫ ಮಾಡುತ್ತಿದ್ದಾರೆ. ಇಂಥವುಗಳನ್ನು ವಿಶ್ವದ ಇತರ ರಾಷ್ಟ್ರಗಳೂ ಜಾರಿಗೆ ತರಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.