ದೇಶ

ನಮ್ಮ ಸೇನೆ ವಿಶ್ವದ ಅತ್ಯಂತ ವೃತ್ತಿಪರತೆಯುಳ್ಳ ಸೇನೆಗಳ ಪೈಕಿ ಗುರುತಿಸಲ್ಪಟ್ಟಿದೆ: ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್

Srinivas Rao BV

ನವದೆಹಲಿ: 68 ನೇ ಸೇನಾ ದಿನಾಚರಣೆಯ ಅಂಗವಾಗಿ ಮಾತನಾಡಿರುವ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಭಾರತೀಯ ಸೇನೆಯನ್ನು ವಿಶ್ವದ ಬಲಿಷ್ಠ ಹಾಗೂ ಅತ್ಯಂತ ವೃತ್ತಿ ಪರತೆಯುಳ್ಳ ಸೇನೆಗಳ ಪೈಕಿ ಗುರುತಿಸಲಾಗುತ್ತದೆ ಎಂದು ಹೇಳಿದ್ದಾರೆ.

ಭಾರತೀಯ ಸೇನೆ, ನೈಸರ್ಗಿಕ ವಿಪತ್ತುಗಳಿಗೆ ಸಮರ್ಥವಾಗಿ ಸ್ಪಂಧಿಸುತ್ತದೆ, ವಿಪತ್ತು ನಿರ್ವಹಣೆ ವಿಷಯದಲ್ಲಿ ಭಾರತೀಯ ಸೇನೆಯ ಕಾರ್ಯಾಚರಣೆಯನ್ನು ವಿದೇಶಗಳೂ ಕೊಂಡಾಡಿವೆ. ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆ ಸನ್ನದ್ಧವಾಗಿದ್ದು, ಸಮಸ್ಯೆಗಳನ್ನು ಮೀರಿ ನಿಲ್ಲುವ ಸಾಮರ್ಥ್ಯ ಹೊಂದಿದ್ದು ವಿಶ್ವದ ಬಲಿಷ್ಠ ಸೇನೆಗಳಲ್ಲಿ ಭಾರತೀಯ ಸೇನೆಯೂ ಒಂದಾಗಿದೆ ಎಂದು ದಲ್ಬೀರ್ ಸಿಂಗ್ ಹೇಳಿದ್ದಾರೆ.

ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಲು ಸೇನೆ, ನೌಕಾದಳ, ವಾಯುಪಡೆ ವಿಭಾಗಗಳ ಹೊಂದಾಣಿಕೆ ಮುಖ್ಯವಾಗಿರುತ್ತದೆ. ಆರ್ಮಿ ಬೇಸ್ ಆಸ್ಪತ್ರೆಗಳಲ್ಲಿ ಹಿರಿಯರಿಗೆ ಚಿಕಿತ್ಸೆ ನೀಡುವುದಕ್ಕಾಗಿಯೆ ಪ್ರತ್ಯೇಕ ವಿಭಾಗ ಪ್ರಾರಂಭಿಸಲಾಗುವುದು ಎಂದು ದಲ್ಬೀರ್ ಸಿಂಗ್ ಹೇಳಿದ್ದಾರೆ. ಲೆಫ್ಟಿನೆಂಟ್ ಜನರಲ್  ಕೆಎಂ ಕಾರ್ಯಪ್ಪ ಜ.15 ರಂದು ಭಾರತೀಯ ಸೇನೆಯ ಮೊದಲ  ಪ್ರಧಾನ ದಂಡನಾಯಕರಾಗಿ ಅಧಿಕಾರ ಸ್ವೀಕರಿಸಿದ ದಿನವನ್ನು ಸೇನಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

SCROLL FOR NEXT