ಲಂಡನ್ : ನೇತಾಜಿ ಸುಭಾಶ್‌ಚಂದ್ರ ಬೋಸ್ ಅವರ ಸಾವಿನ ನಿಗೂಢತೆ ಬಗ್ಗೆ ಬ್ರಿಟನ್ ಮೂಲದ ವೆಬ್‌ಸೈಟ್‌ನಲ್ಲೊಂದು ಲೇಖನ ಪ್ರಕಟವಾಗಿದೆ.
ತೈವಾನ್ ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನೇತಾಜಿ ಸಾವಿಗೀಡಾಗಿದ್ದರು. ಈ ದುರಂತದ 5 ಸಾಕ್ಷಿಗಳು ನೀಡಿರುವ ಹೇಳಿಕೆಯನ್ನು ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಐವರು ಸಾಕ್ಷಿಗಳಲ್ಲಿ ನೇತಾಜಿಯ ಆಪ್ತರೊಬ್ಬರು, ಇಬ್ಬರು ಜಪಾನಿನ ವೈದ್ಯರು, ಒಬ್ಬ ದುಭಾಷಿ ಮತ್ತು ಇಬ್ಬರು ನರ್ಸ್‌ಗಳಿದ್ದಾರೆ. 1945 ಆಗಸ್ಟ್ 18 ರಂದು ತೈಪೆಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲೇ ನೇತಾಜಿ ಸಾವಿಗೀಡಾಗಿದ್ದರು ಎಂದು ಇವರು ಹೇಳಿದ್ದಾರೆ.
ಈ ಸಾಕ್ಷಿಗಳ ಪ್ರಕಾರ ನೇತಾಜಿ ಸಾವಿನ ಬಗ್ಗೆ ಯಾವುದೇ ಬೇರೆ ಅಭಿಪ್ರಾಯಗಳಿಲ್ಲ. ವಿಮಾನ ಅಪಘಾತದಲ್ಲಿ ಅವರಿ ಗೆ ತೀವ್ರ ಗಾಯಗಳಾಗಿತ್ತು. ಅವರು 18 ಅಗಸ್ಟ್ 1945ರ ರಾತ್ರಿಯೇ ಮರಣವಪ್ಪಿದ್ದರು ಎಂದು www.bosefiles.info ಎಂಬ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.