ಮುಂಬೈ: ರಾಜಕಾರಣಿಗಳು ಕ್ರಿಕೆಟ್ ಆಡಳಿತದಿಂದ ದೂರವಿರಬೇಕು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.
ಮುಂಬಯಿನ ಬಿ ಸ್ಕೂಲ್ ವಿದ್ಯಾರ್ಥಿಗಳ ಜೊತೆಗೆ ಸಂಭಾಷಣೆ ನಡೆಸಿದ ರಾಹುಲ್, ಕ್ರಿಕೆಟ್ ಮತ್ತು ಕ್ರೀಡೆಗಳಿಂದ ರಾಜಕಾರಣಿಗಳು ದೂರವಿದ್ದಷ್ಟೂ ಒಳ್ಳೆಯದು ಎಂದು ಹೇಳಿದ್ದಾರೆ. ರಾಜಕಾರಣಿಗಳು ಕ್ರಿಕೆಟ್ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದಿರುವ ರಾಹುಲ್, ಸಭ್ಯರ ಆಟಕ್ಕೆ ರಾಜಕೀಯ ಲೇಪನ ಮಾಡುತ್ತಿರುವ ರಾಜಕಾರಣಿಗಳ ಬಗ್ಗೆ ಎಚ್ಚರ ಎಂದು ಸಲಹೆ ನೀಡಿದರು.
ನರೇಂದ್ರ ಮೋದಿ ಸರ್ಕಾರದ ವಿದೇಶಾಂಗ ನೀತಿ ಹಾಗೂ ಕಾರ್ಯವಿಧಾನಗಳನ್ನು ಟೀಕಿಸಿರುವ ರಾಹುಲ್, ಪಠಾಣ್‌ಕೋಟ್ ದಾಳಿ ಹಾಗೂ ಮೋದಿ ಸರ್ಕಾರದ ವಿದೇಶಾಂಗ ನೀತಿಯಿಂದ ಭಾರತ ಬೆಲೆ ತೆರಬೇಕಾಗಿದೆ ಎಂದು ಆರೋಪಿಸಿದ್ದಾರೆ.