ಡೆಹ್ರಾಡೂನ್: ಡೆಹ್ರಾಡೂನ್‍ನ ಗರ್‍ವಾಲ್ಸ್ ಜೌನ್ಸರ್ ಬವಾರ್ ಪ್ರಾಂತ್ಯದ ಪರುಶುರಾಮ ದೇಗುಲದ ಪ್ರವೇಶಕ್ಕೆ ದಲಿತರು ಮತ್ತು ಮಹಿಳೆಯರಿಗೆ 400 ವರ್ಷಗಳ ಹಿಂದಿನಿಂದಲೂ ಇದ್ದ ನಿಷೇಧವನ್ನು ದೇಗುಲ ಆಡಳಿತ ಸಮಿತಿ ಶುಕ್ರವಾರದಿಂದ ತೆರವುಗೊಳಿಸಿದೆ. ಇನ್ನು ಮುಂದೆ ಎಲ್ಲರಿಗೂ ದೇಗುಲ ಪ್ರವೇಶ ಮುಕ್ತವಾಗಿದೆ ಎಂದು ತಿಳಿಸಿದೆ.
ದಲಿತರು ಮತ್ತು ಮಹಿಳೆಯರಿಗೆ ಈ ದೇಗುಲದಲ್ಲಿ ಜಾರಿಯಲ್ಲಿದ್ದ ನಿಷೇಧದ ವಿರುದ್ಧ ಇಲ್ಲಿನ ಪ್ರಗತಿಪರ ಮತ್ತು ದಲಿತ ಸಂಘಟನೆಗಳು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದವು. ಇದರ ಫಲವಾಗಿ ದೇವಾಲಯ ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಈ ಕುರಿತು ಪ್ರತಿಕ್ರಿಯಿಸಿರು ದೇಗುಲ ಸಮಿತಿ,ಬದಲಾದ ಕಾಲ ಕಾಲಮಾನದಂತೆ ನಾವು ನಡೆದುಕೊಳ್ಳಲಾಗುತ್ತಿದೆ,'' ಎಂದು ಶುಕ್ರವಾರ ತಿಳಿಸಿದೆ.
ಈ ಕುರಿತು ಖಾಸಗಿ ಪತ್ರಿಕೆಯೊಂದು ವರದಿ ಪ್ರಕಟಿಸಿದೆ. `ಈ ಪ್ರಾಂತ್ಯ ಪ್ರಗತಿಪರ ಧೋರಣೆಯತ್ತ ಹೆಜ್ಜೆ ಇಟ್ಟಿದೆ. ಇಲ್ಲಿನ ಸಾಕ್ಷರತೆ ಪ್ರಮಾಣ ಭಾರಿ ಪ್ರಮಾಣದಲ್ಲಿ ವೃದ್ಧಿಯಾಗಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕೆಂಬುದು ಇಲ್ಲಿನ ಜನರ ಒಕ್ಕೊರಲ ಅಭಿಪ್ರಾಯವೂ ಅಗಿದೆ,'' ಎಂದಿದ್ದಾರೆ ದೇಗುಲದ ಆಡಳಿತ ಮಂಡಳಿ ಜವಾಹರ್ ಸಿಂಗ್ ಚೌಹಾಣ್.
ಇದು ನಮ್ಮ ಸಣ್ಣ ಪ್ರಮಾಣದ ಹೋರಾಟಕ್ಕೆ ಸಿಕ್ಕ ಜಯ. ಆದರೆ, ಈ ಪ್ರಾಂತ್ಯದ 339 ದೇಗುಲಗಳಲ್ಲಿ ಇದೇ ರೀತಿ ದಲಿತರಿಗೆ ನಿಷೇಧವಿದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟಗಳು ಸಂಘಟನೆಯಾಗಲಿವೆ,'' ಎಂದು ದಲಿತ ಸಂಘಟನೆಗಳು ಹೇಳಿಕೊಂಡಿವೆ.