ಅರವಿಂದ್ ಕೇಜ್ರಿವಾಲ್ ಮುಖಕ್ಕೆ ಮಸಿ(ಸಂಗ್ರಹ ಚಿತ್ರ) 
ದೇಶ

ದೆಹಲಿ ಸಿಎಂ ಕೇಜ್ರಿವಾಲ್ ಮುಖಕ್ಕೆ ಮಸಿ ಬಳಿದ ಮಹಿಳೆ

ಸಮ ಬೆಸ ಸಂಖ್ಯೆ ಸೂತ್ರದ ಯಶಸ್ಸಿನ ಬಗ್ಗೆ ರ್ಯಾಲಿಯೊಂದರಲ್ಲಿ ಮಾತನಾಡುವ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮುಖಕ್ಕೆ ಮಹಿಳೆಯೊಬ್ಬರು ಮಸಿ ಬಳಿದಿದ್ದಾರೆ.

ನವದೆಹಲಿ: ಸಮ-ಬೆಸ ಸಂಖ್ಯೆ ಸೂತ್ರದ ಯಶಸ್ಸಿನ ಬಗ್ಗೆ ರ್ಯಾಲಿಯೊಂದರಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮುಖಕ್ಕೆ ಮಹಿಳೆಯೊಬ್ಬರು ಮಸಿ ಬಳಿದಿದ್ದಾರೆ. 
ದೆಹಲಿಯ ಚತ್ರಸಾಲ್ ಸ್ಟೇಡಿಯಂ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ಪ್ರಾರಂಭಿಸಿದ ಕೇಜ್ರಿವಾಲ್ ಮೇಲೆ ಭದ್ರತೆಯನ್ನು ಉಲ್ಲಂಘಿಸಿದ ಮಹಿಳೆಯೊಬ್ಬರು ಕೇಜ್ರಿವಾಲ್ ಮೇಲೆ ಮಸಿ ಹಾಗೂ ಪೇಪರ್ ತುಂಡುಗಳನ್ನು ಎರಚಿದ್ದಾರೆ. 
ಅಚ್ಚರಿಯೆಂದರೆ ಮಸಿ ಬಳಿದ ಮಹಿಳೆ ಭಾವನ ಪಂಜಾಬ್ ನ ಆಮ್ ಆದ್ಮಿ ಘಟಕದ ಕಾರ್ಯಕರ್ತೆಯಾಗಿದ್ದಾರೆ. ಮಹಿಳೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಿಎನ್ ಜಿ ಹಗರಣದಲ್ಲಿ ಆದ್ಮಿ ಪಕ್ಷದವರು ಭಾಗಿಯಾಗಿದ್ದು ಇದರ ಬಗ್ಗೆ ತಮ್ಮ ಬಳಿ ಸಾಕ್ಷ್ಯ ಇರುವುದಾಗಿ ಮಹಿಳೆ ಹೇಳಿದ್ದಾರೆ.
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಅರವಿಂದ್ ಕೇಜ್ರಿವಾಲ್ ಅವರ ಭದ್ರತೆ ಉಲ್ಲಂಘನೆಯಾಗಿದೆ, ದೆಹಲಿಯ ಇಡೀ ಸಚಿವ ಸಂಪುಟವೇ ಇದ್ದರೂ ಸಾಕಷ್ಟು ಪ್ರಮಾಣದಲ್ಲಿ ಪೊಲೀಸರಿರಲಿಲ್ಲ ಎಂದು ದೂರಿದ್ದಾರೆ. ದೆಹಲಿ ಪೊಲೀಸರು ಬಿಜೆಪಿ ನಿಯಂತ್ರಣದಲ್ಲಿದ್ದು, ಈ ಘಟನೆ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel