ದೇಶ

ಕೇಂದ್ರ ಬಜೆಟ್‍ನಲ್ಲಿ ತೆರಿಗೆ ಸೌಲಭ್ಯ ಪ್ರಕಟಣೆ

Vishwanath S

ನವದೆಹಲಿ: ದೇಶದಲ್ಲಿ ಸ್ಟಾರ್ಟ್‍ಅಪ್ ಸ್ಥಾಪನೆ ಉತ್ತೇಜಿಸುವಂತೆ ಮುಂದಿನ ಬಜೆಟ್‍ನಲ್ಲಿ ಸುಲಭ ತೆರಿಗೆ ನೀತಿಯನ್ನು ಪ್ರಕಟಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಇಲ್ಲಿ ನಡೆದ ಸ್ಟಾರ್ಟ್‍ಅಪ್ ಸಮಾವೇಶದಲ್ಲಿ ಮಾತನಾಡಿದ ಅವರು, ಉದ್ಯಮ ಸ್ನೇಹಿ ತೆರಿಗೆ ನೀತಿಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದೇವೆ. ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದು ಅಧಿಸೂಚನೆ ಹೊರಡಿಸಬೇಕಾಗಲಿದೆ. ಇದನ್ನು ಶೀಘ್ರದಲ್ಲಿ ಮಾಡಲಾಗುವುದು. ಇನ್ನು ಕೆಲವಕ್ಕೆ ಶಾಸನಾತ್ಮಕ ಅನುಮೋದನೆ ಅಗತ್ಯವಿದ್ದು ಬಜೆಟ್ ನಲ್ಲಿ ಅದನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಸರ್ಕಾರ ಮತ್ತು ಬ್ಯಾಂಕ್‍ಗಳ ಮೂಲಕ ಸ್ಟಾರ್ಟ್‍ಅಪ್‍ಗಳಿಗೆ ಅಗತ್ಯವಾದ ಹಣಕಾಸಿನ ನೆರವು ಒದಗಿಸಲಾಗುವುದು ಎಂದು ಜೇಟ್ಲಿ ಭರವಸೆ ನೀಡಿದರು. ಸ್ಟಾರ್ಟ್‍ಅಪ್‍ಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಉದ್ಯಮ ಸ್ನೇಹಿ ಪರಿಸರ ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಮತ್ತೊಂದು ಪ್ರಮುಖ ಬದಲಾವಣೆ ಮತ್ತು ಹೆಗ್ಗುರುತು ಎಂದರೆ ಲೈಸೆನ್ಸ್ ರಾಜ್ ವ್ಯವಸ್ಥೆ- ಯನ್ನು ನಿರ್ಮೂಲನೆ ಮಾಡಲಾಗುವುದು ಎಂದು ಹೇಳಿದರು. 1991ರಲ್ಲಿ ಲೈಸೆನ್ಸ್ ರಾಜ್ ವ್ಯವಸ್ಥೆಯನ್ನು ದೂರ ಮಾಡಿದ್ದು, ಅದು ಒಂದು ಭಾಗ ಮಾತ್ರ. ಏಕೆಂದರೆ ಅಲ್ಲಿ ಬಂಡವಾಳ ತೊಡಗಿಸುವವರ ಮೇಲೆ ಸರ್ಕಾರದ ಪರೋಕ್ಷ ನಿಯಂತ್ರಣ, ಭೂಮಿ ಮಂಜೂರಾತಿ ನೀಡುವುದರ ಮೇಲೆ ಅಧಿಕಾರ, ರಾಜಕೀಯ ಅನುಮೋದನೆಗಳಿಲ್ಲದೆ ವಿದೇಶಿ ನೇರ ಹೂಡಿಕೆಗೆ ಅನುಮೋದನೆ ಅಗತ್ಯವಿತ್ತು. ಇಂತಹ ಪ್ರಕ್ರಿಯೆಗಳಿಂದ ಉದ್ಯಮಿಗಳು ಮತ್ತು ಹೂಡಿಕೆದಾರರು ಹಿಂದೆ ಸರಿಯುತ್ತಿದ್ದರು ಎಂದು ತಿಳಿಸಿದ್ದಾರೆ.

ಉದ್ಯೋಗ ಸೃಷ್ಟಿಸುವುದರಲ್ಲಿ ಸರ್ಕಾರದ ಸಾಮಥ್ರ್ಯ ಸೀಮಿತವಾಗಿದೆ ಮತ್ತು ಖಾಸಗಿ ವಲಯ ತನ್ನದೇ ಸವಾಲುಗಳನ್ನು ಹೊಂದಿದೆ. ಖಾಸಗಿ ಕಂಪನಿಗಳು ವಿಸ್ತರಣೆಗೆ ಮುಂದಾ- ಗುವುದರಿಂದ ಸವಾಲು ಹೆಚ್ಚಲಿದೆ. ಇದು ಬ್ಯಾಂಕಿಂಗ್ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಬ್ಯಾಂಕ್‍ಗಳ ಸಾಲ ನೀಡುವ ಸಾಮಥ್ರ್ಯ ಹೆಚ್ಚಿಸುವ ಕೆಲಸದಲ್ಲಿ ಸರ್ಕಾರ ಮತ್ತು ಆರ್‍ಬಿಐ ನಿರತವಾಗಿದೆ ಎಂದು ಹೇಳಿದರು.

ಉದ್ಯಮ ಆರಂಭ ನಿಯಮ ಸಡಿಲ
ನವದೆಹಲಿ:
ಯುವ ಉದ್ಯಮಿಗಳು ವಹಿವಾಟು ಅರಂಭಿಸುವುದು ಮತ್ತು ಉದ್ಯಮದಿಂದ ಹೊರಬರುವುದನ್ನು ಸಲೀಸುಗೊಳಿಸಲಾಗುವುದು. ಇದರೊಂದಿಗೆ ದೇಶದಲ್ಲಿನ ಸ್ಟಾರ್ಟ್‍ಅಪ್ ಪರಿಸರಕ್ಕೆ ಉತ್ತೇಜನ ತುಂಬಲಾಗುವುದು ಎಂದು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಉದ್ಯಮಿಯೊಬ್ಬರು ವಹಿವಾಟನ್ನು ಆರಂಭಿಸುವಷ್ಟೇ ಮುಖ್ಯ ವಹಿವಾಟಿನಿಂದ ಹೊರಬರುವುದು. ದಿವಾಳಿ ಕಾಯ್ದೆ ರೋಗಗ್ರಸ್ತ ಕಂಪನಿಯನ್ನು ಮುಚ್ಚುವುದನ್ನು ಸುಲಭಗೊಳಿಸಲಿದೆ ಎಂದು ತಿಳಿಸಿದರು.

SCROLL FOR NEXT