ದೇಶ

ನೆಟ್ ಕಡಿವಾಣಕ್ಕೆ ಬರಲಿದೆ ಬಾಡಿಗಾರ್ಡ್

Srinivasamurthy VN

ನವದೆಹಲಿ: ಮಕ್ಕಳ ಕೈಗೆ ಮೊಬೈಲ್ ಎಂದೊಡನೆ ಮೊದಲು ಎದುರಾಗುವ ಪ್ರಶ್ನೆ ಇಂಟರ್‍ನೆಟ್ ಮೂಲಕ ಅವರು ನೋಡಬಾರದ್ದನ್ನು ನೋಡುವ ಆತಂಕ. ಮೊಬೈಲ್ ಇಂಟರ್‍ನೆಟ್ ಬಳಕೆ ಹೆಚ್ಚಾದಂತೆ ಎದುರಾದ ದೊಡ್ಡ ಆತಂಕ, ಮಕ್ಕಳ ಕೈಯಲ್ಲಿ ಅದು ಸೃಷ್ಟಿಸಬಹುದಾದ ವಿಕೃತಿಗಳ ಬಗ್ಗೆ.

ಮಕ್ಕಳಿಗೆ ನೆಟ್ ಮೂಲಕ ಪೋರ್ನ್ ಸುಲಭವಾಗಿ ಕೈಗೆಟುಕುವುದನ್ನು ತಡೆಯುವುದು ಹೇಗೆ? ಮೊಬೈಲ್ ಅವರ ಕೈಗಿತ್ತೂ, ಅವರ ಇಂಟರ್‍ನೆಟ್ ಹುಡುಕಾಟದ ಮೇಲೆ ಒಂದು ಕಣ್ಣಿಡುವುದು ಹೇಗೆ  ಎಂಬುದು ತಂದೆತಾಯಿಗಳ ಆತಂಕವಾಗಿತ್ತು. ಅಂಥ ಆತಂಕ ನಿವಾರಿಸುವ ನಿಟ್ಟಿನಲ್ಲಿ ಟೆಲಿಕಾಂ ಸಂಸ್ಥೆಗಳು ಹಾಗೂ ಇಂಟರ್ ನೆಟ್ ಸೇವಾ ಸಂಸ್ಥೆಗಳು ಮಹತ್ವದ ಹೆಜ್ಜೆ ಇಟ್ಟಿವೆ.

ಆ ಹಿನ್ನೆಲೆಯಲ್ಲಿ ಟೆಲಿಕಾಂ ಕಂಪನಿಗಳು ಮತ್ತು ಇಂಟರ್‍ನೆಟ್ ಸೇವಾ ಸಂಸ್ಥೆಗಳು ನ್ಯೂಜಿಲೆಂಡ್ ಮೂಲದ ಬೈಪಾಸ್ ನೆಟ್‍ವರ್ಕ್ ಸರ್ವೀಸಸ್(ಬಿಎನ್‍ಎಸ್‍ಎಲ್) ನೊಂದಿಗೆ ನಿರಂತರ ಮಾತುಕತೆಯಲ್ಲಿದ್ದು, ಸಂಸ್ಥೆ ಅಭಿವೃದ್ಧಿಪಡಿಸಿರುವ `ಬಾಡಿಗಾರ್ಡ್' ಎಂಬ ನಿಗಾ ವ್ಯವಸ್ಥೆ ಅಳವಡಿಕೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿವೆ ಎಂದು ಸಂಸ್ಥೆಯ ಸಹಸಂಸ್ಥಾಪಕರಲ್ಲಿ ಒಬ್ಬರಾದ  ಮಾಥ್ಯೂ ಜಾಕ್ಸನ್ ಹೇಳಿರುವುದಾಗಿ `ದ ಎಕನಾಮಿಕ್ ಟೈಮ್ಸ್' ವರದಿ ಮಾಡಿದೆ.

SCROLL FOR NEXT