ನವದೆಹಲಿ: ಪ್ರಸಕ್ತ ಸಕ್ಕರೆ ವರ್ಷದಲ್ಲಿ ಜನವರಿ 15ರವರೆಗೆ ದೇಶದ ಸಕ್ಕರೆ ಉತ್ಪಾದನೆ ಶೇ.7ರಷ್ಟು ಏರಿಕೆ ಕಂಡಿದ್ದು 110.90 ಲಕ್ಷ ಟನ್‍ಗೆ ತಲುಪಿದೆ.
ದೇಶದಲ್ಲಿನ ಸಕ್ಕರೆ ಕಾರ್ಖಾನೆಗಳು ಇದುವರೆಗೂ 9 ಲಕ್ಷ ಟನ್ ರಫ್ತಿಗೆ ಮಾತ್ರ ಆರ್ಡರ್‍ಗಳನ್ನು ಪಡೆದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಬ್ಬು ಲಭ್ಯತೆ ಕಡಿಮೆ ಇದ್ದರೂ ಕಾರ್ಖಾನೆಗಳು ಈ ವರ್ಷದ ಆರಂಭದಿಂದಲೇ ನುರಿಯುವಿಕೆ ಆರಂಭಿಸಿದವು. ಆದರೆ ಇದುವರೆಗೆ ಉತ್ಪಾದನೆಯಾಗಿರುವ ಸಕ್ಕರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಒಕ್ಕೂಟ (ಇಸ್ಮಾ) ಹೇಳಿದೆ. ಈ ವರ್ಷವೂ ದೇಶದಲ್ಲಿ 26ರಿಂದ 27 ದಶಲಕ್ಷ ಟನ್ ಸಕ್ಕರೆ ಹೆಚ್ಚು ಉತ್ಪಾದನೆಯಾಗುವ ಅಂದಾಜುಗಳಿವೆ.