ದೆಹಲಿ ಪೊಲೀಸರು ಬಿಡುಗಡೆ ಮಾಡಿರುವ ನಾಪತ್ತೆಯಾದ ಕಾರಿನ ಚಿತ್ರ 
ದೇಶ

ಪಠಾಣ್ ಕೋಟ್ ಕಾರು ನಾಪತ್ತೆ, ಚಾಲಕ ನಿಗೂಢ ಸಾವು, ದೆಹಲಿಯಲ್ಲಿ ಕಟ್ಟೆಚ್ಚರ

ಪಠಾಣ್​ಕೋಟ್​ನಿಂದ ಬಾಡಿಗೆಗೆ ಒಯ್ಯಲಾಗಿದ್ದ ಟ್ಯಾಕ್ಸಿಯೊಂದು ನಾಪತ್ತೆಯಾಗಿದ್ದು, ಕಾರಿನ ಚಾಲಕ ನಿಗೂಢವಾಗಿ ಸಾವನ್ನಪ್ಪದ್ದಾನೆ. ಕಾರು ಕಾಣೆಯಾದ...

ನವದೆಹಲಿ: ಪಠಾಣ್​ಕೋಟ್​ನಿಂದ ಬಾಡಿಗೆಗೆ ಒಯ್ಯಲಾಗಿದ್ದ ಟ್ಯಾಕ್ಸಿಯೊಂದು ನಾಪತ್ತೆಯಾಗಿದ್ದು, ಕಾರಿನ ಚಾಲಕ ನಿಗೂಢವಾಗಿ ಸಾವನ್ನಪ್ಪದ್ದಾನೆ. ಕಾರು ಕಾಣೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ದೆಹಲಿ ಪೊಲೀಸರು ರಾಜಧಾನಿಯಲ್ಲಿ ಕಟ್ಟೆಚ್ಚರ ಘೊಷಿಸಿದ್ದಾರೆ.
ಮೂವರು ಅಪರಿಚಿತ ವ್ಯಕ್ತಿಗಳು ಪಠಾಣ್​ಕೋಟ್​ನಿಂದ ಬಿಳಿ ಆಲ್ಟೋ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದಿದ್ದರು ಎನ್ನಲಾಗಿದೆ. ಪಠಾಣ್‌ಕೋಟ್‌ ವಾಯುನೆಲೆಯ ಮೇಲೆ ಉಗ್ರ ದಾಳಿಯ ಬಳಿಕ ಐಟಿಬಿಪಿ ಪೊಲೀಸ್‌ ಒಬ್ಬರ ಕಾರು ನಾಪತ್ತೆಯಾಗಿತ್ತು.ಇದೀಗ ಇನ್ನೊಂದು ಆಲ್ಟೋ ಕಾರು ನಿಗೂಢವಾಗಿ ನಾಪತ್ತೆಯಾಗಿರುವುದು ಭದ್ರತಾ ಸಿಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಗಣರಾಜ್ಯೋತ್ಸವ ಸಂದರ್ಭದಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಕಾರು ನಾಪತ್ತೆಯಾಗಿರುವುದು ಇದೀಗ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಮೃತ ಟ್ಯಾಕ್ಸಿ ಚಾಲಕನನ್ನು ವಿಜಯಕುಮಾರ್ ಎಂದು ಗುರುತಿಸಲಾಗಿದ್ದು, ಬುಧವಾರ ಆತನ ಶವ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಪತ್ತೆಯಾಗಿದೆ.
ದೆಹಲಿ ಪೊಲೀಸರು ಕಾರಿನ ವಿವರಗಳನ್ನು ಟ್ವೀಟ್ ಮಾಡಿದ್ದು, ಮಾಧ್ಯಮಗಳಿಗೂ ಟ್ವೀಟ್​ನ್ನು ಜೋಡಿಸಿದ್ದಾರೆ. ಪೊಲೀಸರ ಪ್ರಕಾರ ಕಾರಿನ ರಿಜಿಸ್ಟ್ರೇಷನ್ ನಂಬರ್ ಎಚ್​ಪಿ01ಡಿ2440 ಎಂದು ಹೇಳಲಾಗಿದೆ. ಹಿರಿಯ ಗಡಿ ಪೊಲೀಸ್ ಅಧಿಕಾರಿಯೊಬ್ಬರ ನೀಲಿ ದೀಪದ ಎಸ್​ಯುುವಿ ವಾಹನ ಕೂಡಾ ಬುಧವಾರ ನಸುಕಿನಲ್ಲಿ ದೆಹಲಿ ಸಮೀಪದ ನೋಯ್ಡಾದಿಂದ ಕಳುವಾಗಿತ್ತು. ಈ ಘಟನೆಯ ಬೆನ್ನಲ್ಲೇ ಬಾಡಿಗೆ ಕಾರಿನ ಚಾಲಕ ಮೃತನಾಗಿ ಕಾರು ಕಣ್ಮರೆಯಾಗಿರುವ ಘಟನೆ ಪೊಲೀಸರಿಗೆ ತಲೆ ನೋವು ತಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಫ್ ದೇಶಗಳ ಯಾವುದೇ ಬಂದರು ಸುರಕ್ಷಿತವಲ್ಲ; ಅಮೆರಿಕದ ಕ್ರಮ "ಕಡಲ್ಗಳ್ಳತನ"ಕ್ಕೆ ಸಮ: ಇರಾನ್ ಖಡಕ್ ವಾರ್ನಿಂಗ್

West Asia War: ಇರಾನ್‌ಗೆ ಮಿಲಿಟರಿ ಬೆಂಬಲ ನೀಡಿದರೆ ಶೇ 50ರಷ್ಟು ಸುಂಕ; ಚೀನಾಗೆ ಡೊನಾಲ್ಡ್ ಟ್ರಂಪ್ ಬೆದರಿಕೆ

'ಡೊನಾಲ್ಡ್ ಟ್ರಂಪ್ ಜೊತೆ ಚರ್ಚೆ ಮಾಡುವ ಉದ್ದೇಶ ನನಗಿಲ್ಲ': ಪೋಪ್ ಲಿಯೋ XIV

ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿಗೆ CM ಗದ್ದುಗೆ! ನಾಳೆ ನಿತೀಶ್ ರಾಜೀನಾಮೆ? ನೂತನ ಮುಖ್ಯಮಂತ್ರಿ ಆಯ್ಕೆ ಸಾಧ್ಯತೆ

ಬೈಕ್ ಚಾಲನೆ ಮಾಡುತ್ತಾ Reels ರೆಕಾರ್ಡ್, ಭೀಕರ ಅಪಘಾತದಲ್ಲಿ ಯುವತಿ ಸಾವು, ಯುವಕ ಗಂಭೀರ! video

SCROLL FOR NEXT