ಸಾಂದರ್ಭಿಕ ಚಿತ್ರ 
ದೇಶ

ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ರೇಡಿಯೋ ಜಾಕಿ ಪತ್ನಿ ಆತ್ಮಹತ್ಯೆ

ಅಹಮದಾಬಾದ್ ನ ರೇಡಿಯೋ ಜಾಕಿ ಕುಣಾಲ್‌ ಎಂಬಾತನನ್ನು ವಿವಾಹವಾಗಿದ್ದ ಭೂಮಿ ದೇಸಾಯಿ ಎಂಬ ಯುವತಿ ಅಪಾರ್ಟ್ ಮೆಂಟ್ ನಿಂದ ಜಿಗಿದು ,,,

ಅಹಮದಾಬಾದ್: ಅಹಮದಾಬಾದ್ ನ ರೇಡಿಯೋ ಜಾಕಿ ಕುಣಾಲ್‌ ಎಂಬಾತನನ್ನು ವಿವಾಹವಾಗಿದ್ದ ಭೂಮಿ ದೇಸಾಯಿ ಎಂಬ ಯುವತಿ ಅಪಾರ್ಟ್ ಮೆಂಟ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

2014ರ  ನವೆಂಬರ್‌ 24ರಂದು  ಭೂಮಿ ದೇಸಾಯಿ ಮತ್ತು ರೇಡಿಯೋ ಜಾಕಿ ಕುನಾಲ್ ದೇಸಾಯಿ ವಿವಾಹವಾಗಿದ್ದರು.  ಕೌಟುಂಬಿಕ ಕಾರಣ ಹಿನ್ನೆಲೆಯಲ್ಲಿ ಆನಂದನಗರ ಪ್ರದೇಶದಲ್ಲಿನ ಹತ್ತು ಮಹಡಿಯ ವಸತಿ ಕಟ್ಟಡದ ಟೆರೇಸ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಭೂಮಿ ದೇಸಾಯಿ ನಗರದ ಶ್ಯಾಮಲಾ ಕ್ರಾಸ್‌ ರಸ್ತೆಯಲ್ಲಿರುವ ಸಚಿನ್‌ ಟವರ್‌ ಗೆ ತನ್ನ ಕಾರಿನಲ್ಲಿ  ಗುರುವಾರ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಬಂದಿದ್ದಳು. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುನ್ನ ಆಕೆ ಮಿತೇಶ್‌ ಸೋನಿ ಎಂಬಾತನಿಗೆ ತನ್ನ ನಿರ್ಧಾರದ ಬಗ್ಗೆ ಎಸ್‌ಎಂಎಸ್‌ ಮಾಡಿದ್ದಾಳೆ. 2.30ರ ಹೊತ್ತಿಗೆ ಸಚಿನ್‌ ಟವರ್ ಟೆರೇಸ್‌ನಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆನಂದನಗರ ಪೊಲೀಸ್‌ ಇನ್ಸ್‌ಪೆಕ್ಟರ್‌ ಪಿ ವಿ ಜಡೇಜಾ ತಿಳಿಸಿದ್ದಾರೆ.

ಕಳೆದ ವಾರ ದಂಪತಿ ನಡುವೆ ಜಗಳ ನಡೆದಿತ್ತು ಎಂದು ಹೇಳಿರುವ ಪೊಲೀಸರು. ಯಾವ ವಿಷಯಕ್ಕಾಗಿ ಜಗಳ ನಡೆದಿದೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಕುಣಾಲ್ ನನ್ನು ವಿಚಾರಣೆಗೊಳಪಡಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT