ಹೈದರಾಬಾದ್: ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲಾ ಪ್ರಕರಣದಲ್ಲಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಭಾರಿ ಹಿನ್ನಡೆಯಾಗಿದೆ. ನಿನ್ನೆ ವಿವಿ ಆಡಳಿತ ಮಂಡಳಿ ಘೋಷಿಸಿದ್ದ 8 ಲಕ್ಷ ರುಪಾಯಿ ಪರಿಹಾರವನ್ನು ರೋಹಿತ್ ಕುಟುಂಬ ನಿರಾಕರಿಸಿದೆ. ಅಲ್ಲದೆ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಇಂದು ವಿವಿ ಕ್ಯಾಂಪಸ್ ಗೆ ಭೇಟಿ ನೀಡಿದ ವೇಮುಲಾ ತಾಯಿ ರಾಧಿಕಾ, ಸಹೋದರಿ ನೀಲಿಮಾ ಹಾಗೂ ಸಹೋದರ ರಾಜು ಅವರು ರೋಹಿತ್ ಸಾವಿಗೆ ಕಾರಣರಾದವರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
8 ಲಕ್ಷ ಅಲ್ಲ, ಅವರು 8 ಕೋಟಿ ಪರಿಹಾರ ಕೊಟ್ಟರೂ ನಮಗೆ ಬೇಡ ಎಂದು ನೀಲಿಮಾ ಅವರು ಹೇಳಿದ್ದಾರೆ.
ಇದೇ ವೇಳೆ ರೋಹಿತ್ ಸಾವಿನ ನಂತರ ಐದು ದಿನ ವಿಳಂಬ ಮಾಡಿ ಫೋನ್ ಮಾಡಿದ್ದು ಏಕೆ? ನೀವು ಒಬ್ಬ ಮಹಿಳೆ ಅಲ್ಲವೆ? ನೀವು ಒಬ್ಬ ತಾಯಿ ಅಲ್ಲವೆ? ಕುಟುಂಬದವರಿಗೆ ಸಾಂತ್ವನ ಹೇಳಲು ಐದು ದಿನ ಬೇಕೇ? ಎಂದು ಸ್ಮೃತಿ ಇರಾನಿ ಅವರನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ಪ್ರಧಾನಿಯವರು ಸಹ ಕುಂಬಾ ತಡವಾಗಿ ತಮ್ಮ ಮಗನ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವುದು ನೋವು ತಂದಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics