ಕಾಲೇಜಿನ ಮುಂದೆ ಪ್ರತಿಭಟನೆ ನಡೆಸುತ್ತಿರುವ ಮೂವರು ವಿದ್ಯಾರ್ಥಿನಿಯರ ಪೋಷಕರು ಮತ್ತು ಸಂಬಂಧಿಕರ... 
ದೇಶ

ಆತ್ಮಹತ್ಯೆಯಲ್ಲ ಇದೊಂದು ಕೊಲೆ: ವಿದ್ಯಾರ್ಥಿನಿಯರ ಪೋಷಕರ ಆಕ್ರೋಶ

ನಮ್ಮ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದೊಂದು ಕೊಲೆ ಎಂದು ತಮಿಳುನಾಡಿನಲ್ಲಿ ಬಾವಿಗೆ ಹಾರಿ ಮೃತಪಟ್ಟ...

ವಿಲ್ಲುಪುರಂ: ನಮ್ಮ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದೊಂದು ಕೊಲೆ ಎಂದು ತಮಿಳುನಾಡಿನಲ್ಲಿ ಬಾವಿಗೆ ಹಾರಿ ಮೃತಪಟ್ಟ ವಿದ್ಯಾರ್ಥಿನಿಯರ ಪೋಷಕರು ಆರೋಪಿಸಿದ್ದಾರೆ. 
ಆಡಳಿತ ಮಂಡಳಿ ವಿರುದ್ಧ ಹೋರಾಟಕ್ಕೆ ಇಳಿದ ಹಿನ್ನಲೆಯಲ್ಲಿ ಆಡಳಿತ ಮಂಡಳಿ ಅಧಿಕಾರಿಗಳೇ ನಮ್ಮ ಮಕ್ಕಳನ್ನು ಕೊಲೆ ಮಾಡಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ಕೈಗೊಂಡಿರುವ ಕಾಲೇಜು ವಿದ್ಯಾರ್ಥಿನಿಯರು ಮತ್ತು ಸಾವನ್ನಪ್ಪಿರುವ ವಿದ್ಯಾರ್ಥಿನಿಯರ ಪೋಷಕರು ಸಂಸ್ಥೆ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಮೂವರು ವಿದ್ಯಾರ್ಥಿನಿಯರ ಪೋಷಕರು, ಸಂಬಂಧಿಕರು ಹಾಗೂ ಸಾರ್ವಜನಿಕರ ಪ್ರತಿಭಟನೆ ತೀವ್ರಗೊಂಡ ನಂತರ ಕಾಲೇಜಿಗೆ ಬೀಗ ಹಾಕಲಾಗಿದೆ. 
ವಿಲ್ಲುಪುರಂ ನ ಪ್ರತಿಷ್ಠಿತ ಎಸ್ ವಿಎಸ್ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ವೈದ್ಯಕೀಯ ಕಾಲೇಜಿನಲ್ಲಿ ನ್ಯಾಚುರೋಪತಿ ಕೋರ್ಸ್ ಮಾಡುತ್ತಿದ್ದ ವಿ ಪ್ರಿಯಾಂಕಾ, ಟಿ ಮೋನಿಶಾ ಹಾಗೂ ಇ ಶರಣ್ಯ ಅವರ ಮೃತದೇಹ ಶನಿವಾರ ರಾತ್ರಿ ಬಾವಿಯಲ್ಲಿ ಪತ್ತೆಯಾಗಿತ್ತು.
ಈ ಮೂವರು ವಿದ್ಯಾರ್ಥಿನಿಯರು ಆತ್ಮಹತ್ಯೆ ಪತ್ರ ಬರೆದಿದ್ದರು. ಅದರಲ್ಲಿ ಕಾಲೇಜು ಆಡಳಿತ ಮಂಡಳಿ ನಮ್ಮಿಂದ ಅಧಿಕ ಹಣವನ್ನು ನಿರೀಕ್ಷಿಸುತ್ತಿದೆ. ಈ ಸಂಬಂಧ ಕಾಲೇಜಿನ ಅಧ್ಯಕ್ಷ ವಾಸುಕಿ ಸುಬ್ರಮಣಿಯನ್ ಅವರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ನಮ್ಮ ಸಾವಿನಿಂದಾದರೂ ಬದಲಾವಣೆ ಬರಲಿ ಎಂದು ಬಯಸುತ್ತೇವೆ ಎಂದು ಎರಡು ಪುಟಗಳ ಪತ್ರ ಬರೆದಿದ್ದರು. 
ಈಗಾಗಲೇ ಪ್ರಕರಣ ಸಂಬಂಧ ಆಡಳಿತ ಮಂಡಳಿಯ ಅಧ್ಯಕ್ಷನ ಪುತ್ರನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?

1 ವರ್ಷ ಗ್ಯಾರಂಟಿ ಯೋಜನೆಗಳ ನಿಲ್ಲಿಸಿ, ಹಣವನ್ನು ರೈತರಿಗೆ ನೀಡಿ: ರಾಜ್ಯ ಸರ್ಕಾರಕ್ಕೆ ದಿಂಗಾಲೇಶ್ವರ ಶ್ರೀಗಳ ಆಗ್ರಹ

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ 18 ನಿಮಿಷದಲ್ಲಿ ಜೀವಂತ ಹೃದಯ ಸಾಗಾಟ!