ಸಾಂದರ್ಭಿಕ ಚಿತ್ರ 
ದೇಶ

ರಾಜಕಾರಣಿಗಳೇ ಟಾರ್ಗೆಟ್ ಅಂತೆ

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯಿಂದ ಬಂಧನಕ್ಕೊಳಗಾಗಿರುವ ಅನ್ಸರ್ ಉಲ್ ತ್ವಹೀದ್ ಸಂಘಟನೆಯ 14 ಶಂಕಿತ ಉಗ್ರರ ವಿಚಾರಣೆ ವೇಳೆ ಆಘಾತಕಾರಿ...

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯಿಂದ ಬಂಧನಕ್ಕೊಳಗಾಗಿರುವ ಅನ್ಸರ್ ಉಲ್  ತ್ವಹೀದ್ ಸಂಘಟನೆಯ  14 ಶಂಕಿತ ಉಗ್ರರ ವಿಚಾರಣೆ ವೇಳೆ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ. ಜನನಿಬಿಡ ಪ್ರದೇಶ. ಮಾರುಕಟ್ಟೆ ಸ್ಥಳಗಳಲ್ಲಿ ದಾಳಿ ನಡೆಸುವುದನ್ನು ಬಿಟ್ಟು ಇನ್ನು ಮುಂದೆ  ರಾಜಕಾರಣಿಗಳು,  ಪ್ರಮುಖ ಕಟ್ಟಡಗಳು, ಆಯಕಟ್ಟಿನ ಪ್ರದೇಶಗಳು, ವಿದೇಶಿಯರು ಮತ್ತು ಸರ್ಕಾರದ ಆಡಳಿತ ಯಂತ್ರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಅವರಿಗೆ ಐಎಸ್ ಉಗ್ರ ಸಂಘಟನೆಯ ಸದಸ್ಯರು ನಿರ್ದೇಶನ ನೀಡಿದ್ದರು ಎಂಬ ಸಂಗತಿ ಬಯಲಾಗಿದೆ.
ಇದು ಹೊಸ ಮಾದರಿಯ ಭಯೋತ್ಪಾದನೆ. ಇದರ ಹಿಂದೆ, ದೇಶದಲ್ಲಿ ಅಸ್ಥಿರತೆ ಉಂಟು ಮಾಡುವ ಉದ್ದೇಶವಿದೆ  ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 
ಸಾರ್ವಜನಿಕ ಪ್ರದೇಶಗಳಲ್ಲಿ ಅಂದರೆ ಸಾಮಾನ್ಯ ಜನರ ಮೇಲೆ ದಾಳಿ ನಡೆಸಿದರೆ  ನಿರೀಕ್ಷಿತ  ಫಲಿತಾಂಶ ದೊರೆಯದು, ಉದ್ದೇಶ ಈಡೇರದು ಎಂದಿದ್ದ ಐಎಸ್, ರಾಜಕಾರಣಿಗಳನ್ನು ಟಾರ್ಗೆಟ್ ಮಾಡುವಂತೆ ಸೂಚಿಸಿತ್ತು ಎಂದು ಉಗ್ರರು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ ಎಂದು ಟೈಮ್ಸ್  ಆಫ್ ಇಂಡಿಯಾ ವರದಿ ಮಾಡಿದೆ.
ಆದರೆ, ಈ ರೀತಿಯ ದಳಿ ಬಗ್ಗೆ ಮುಜಾಹಿದೀನ್ ನ ಉಗ್ರರು  ಎಚ್ಚರಿಕೆಯನ್ನೂ ಕೊಟ್ಟಿದ್ದರು. ರಾಜಕಾರಣಿಗಳ ಮೇಲೆ ದಾಳಿ ಮಾಡುವುದು ಸುಲಭದ ಕೆಲಸವಲ್ಲ, ಹೀಗೆ ಮಾಡುವುದರಿಂದ ಅದು ಸಮುದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದೂ ಎಚ್ಚರಿಕೆ ಕೊಟ್ಟಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಫೆ. 5ರ ವರೆಗೆ ಎನ್‌ಐಎ ವಶಕ್ಕೆ: ಸದ್ಯ ಬಂಧನಕ್ಕೊಳಗಾಗಿರುವ  14 ಶಂಕಿತರ ಪೈಕಿ ಇಬ್ಬರನ್ನು ಭಾನಾವರ ದೆಹಲಿ ನ್ಯಾಯಾಲಯಕ್ಕೆ  ಹಾಜರು ಪಡಿಸಲಾಗಿದ್ದು, ಇಬ್ಬರಮ್ಮೂ 13 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಲಿ ಕೋರ್ಟ್ ಆದೇಶ ಹೊರಡಿಸಿತ್ತು. ಇನ್ನುಳಿದ 13 ಮಂದಿಯನ್ನು ಫೆ. 5ರ ವರೆಗೆ ಎನ್‌ಐಎ ವಶಕ್ಕೆ ನೀಡಿ, ಸೋಮವಾರ ಕೋರ್ಟ್ ಆದೇಶ ಹೊರಡಿಸಿದೆ.
ಗಾಂಧಿ ಬೆನ್ನ ಮೇಲೆ ಬೆದರಿಕೆ
ಗಣರಾಜ್ಯೋತ್ಸವ ದಿನದಂದು ಐಎಸ್ ಉಗ್ರ ಸಂಘಟನೆ ಬಾಂಬ್ ದಾಳಿ ನಡೆಸಲಿದೆ ಎಂದು ರಾಜಸ್ಥಾನದ ಜೈಪುರದ ದುದು ಎಂಬಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಮೇಲೆ ಬರೆಯಲಾಗಿದೆ. ಈ ಸಂದೇಶ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಹಿಂದೆ ಯಾರ ಕೈವಾಡವಿದೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್