ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ (ಸಂಗ್ರಹ ಚಿತ್ರ) 
ದೇಶ

ತಮ್ಮ ಸಾವಿನ ಸುದ್ದಿ ಕೇಳಿ ನಕ್ಕ ಪವಾರ್

ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ತಾವು ಸಾವಿಗೀಡಾದರು ಎಂಬ ಸುದ್ದಿ ಹರಡಿದರೆ ಯಾರಿಗಾದರೂ ಕೋಪ ನೆತ್ತಿಗೇರದೇ ಇರದು. ಆದರೆ ಎನ್ ಸಿಪಿ ಮುಖ್ಯಸ್ಖ ಶರದ್ ಪವಾರ್ ಅವರಂತೂ ತಮ್ಮ ಬಗ್ಗೆ ಹರಡಿದ ಇಂಥ ಸುದ್ದಿ ಕೇಳಿ ಹೊಟ್ಟೆ ಹುಣ್ಣಾಗುವಂತೆ ನಕ್ಕುಬಿಟ್ಟರಂತೆ...

ಪುಣೆ: ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ತಾವು ಸಾವಿಗೀಡಾದರು ಎಂಬ ಸುದ್ದಿ ಹರಡಿದರೆ ಯಾರಿಗಾದರೂ ಕೋಪ ನೆತ್ತಿಗೇರದೇ ಇರದು. ಆದರೆ ಎನ್ ಸಿಪಿ ಮುಖ್ಯಸ್ಖ ಶರದ್ ಪವಾರ್ ಅವರಂತೂ ತಮ್ಮ ಬಗ್ಗೆ ಹರಡಿದ ಇಂಥ ಸುದ್ದಿ ಕೇಳಿ ಹೊಟ್ಟೆ ಹುಣ್ಣಾಗುವಂತೆ ನಕ್ಕುಬಿಟ್ಟರಂತೆ.

ಮೊನ್ನೆ ತಾನೇ ಪವಾರ್ ಅವರು ಮಾಮೂಲಿನಂತೆ ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ಹೋಗಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಯಾರೋ "ಪವಾರ್ ಕೊನೆಯುಸಿರೆಳೆದರು" ಎಂಬ ಗಾಳಿಸುದ್ದಿ ಹರಿಬಿಟ್ಟಿದ್ದಾರೆ. ಇದು ಟ್ವಿಟ್ಟರ್ ಮತ್ತು ಫೇಸ್ ಬುಕ್ ಗಳಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು. ಕೆಲವರಂತೂ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, "ಗಣರಾಜ್ಯೋತ್ಸವ ಇರುವ ಕಾರಣ ಪವಾರ್ ಮೃತಪಟ್ಟ ಸುದ್ದಿಯನ್ನು ಮುಚ್ಚಿಡಲಾಗಿದೆ. ಬುಧವಾರ ಈ ನೋವಿನ ಸಂಗತಿಯನ್ನು ಬಹಿರಂಗ ಪಡಿಸಲಾಗುತ್ತದೆ" ಎಂದೂ ಟ್ವೀಟ್ ಮಾಡಿದ್ದಾರೆ.

ಎಚ್ಚೆತ್ತ ಎನ್ ಸಿಪಿ, ಕೂಡಲೇ ಪವಾರ್ ಅವರು, ಬೆಡ್ ನಲ್ಲಿ ಕುಳಿತು ಮಗಳು ಸುಪ್ರಿಯಾ ಸುಳೆ ಜತೆ ಮಾತನಾಡುತ್ತಾ ಕುಳಿತಿದ್ದ ವಿಡಿಯೋವೊಂದನ್ನು ಬಿಡುಗಡೆ ಮಾಡಿತು. ಪವಾರ್ ಅವರೂ ಈ ವಿಷಯ ಕೇಳಿ ನಕ್ಕು, ಈ ಹಿಂದಿನ ಇಂಥ ಘಟನೆಗಳನ್ನು ಸ್ಮರಿಸುತ್ತಾ ಖುಷಿಪಟ್ಟರಂತೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ರಾಜ್ಯಸಭಾ ಸದಸ್ಯತ್ವ ನಿರಾಕರಣೆ

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

Siddaramaiah Press Meet: 'ಹೈಕಮಾಂಡ್ ಆದೇಶದ ಮೇಲೆ ರಾಜಿನಾಮೆ ನೀಡಿದ್ದೇನೆ': ಸಿದ್ದರಾಮಯ್ಯ ವಿದಾಯದ ಮಾತು

Siddaramaiah ರಾಜಿನಾಮೆ: 'ನಾನು ಆ ಪಕ್ಷದಲ್ಲಿ ಇಲ್ಲದೆ ಇರಬಹುದು, ಆದರೆ ಅವರೊಂದಿಗಿನ ಒಡನಾಟ ಮರೆಯುವಂತದ್ದಲ್ಲ': BC ಪಾಟೀಲ್ ಭಾವುಕ

ಬೆಂಗಳೂರು ಬಲು ದುಬಾರಿ: ನಮ್ ಊರಲ್ಲಿ ಬಟ್ಟೆ ಇಸ್ತ್ರಿಗೆ ಬರೀ 5 ರೂಪಾಯಿ, ಆದ್ರೆ ಇಲ್ಲಿ 20 ರೂಪಾಯಿ!: ನೊಯ್ಡಾ ನಿವಾಸಿ ಅಚ್ಚರಿ!

SCROLL FOR NEXT