2 ವರ್ಷಗಳಲ್ಲಿ ಶೇ.50 ರಷ್ಟು ರೈತರು ಬೆಳೆ ವಿಮಾ ಯೋಜನೆಯ ಭಾಗವಾಗಬೇಕು: ಪ್ರಧಾನಿ ಮೋದಿ
ಬೆಳೆ ವಿಮಾ ಯೋಜನೆಯ ಪ್ರಯೋಜನಗಳ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, 2 ವರ್ಷಗಳಲ್ಲಿ ಕನಿಷ್ಠ ಶೇ.50 ರಷ್ಟು ರೈತರು ಯೋಜನೆಯ ಭಾಗವಾಗಬೇಕು ಎಂದು ಹೇಳಿದ್ದಾರೆ.
ನವದೆಹಲಿ: ವರ್ಷದ ಪ್ರಥಮ ಮನ್ ಕಿ ಬಾತ್ ನ ಸಂಚಿಕೆಯಲ್ಲಿ ಇತ್ತೀಚೆಗಷ್ಟೆ ಜಾರಿಗೆ ಬಂದಿರುವ ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆಯ ಪ್ರಯೋಜನಗಳ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಯೋಜನೆ ಬಗ್ಗೆ ಜಾಗೃತಿ ಮೂಡಿಸಬೇಕು, ಆ ಮೂಲಕ ಕೇವಲ 2 ವರ್ಷಗಳಲ್ಲಿ ಕನಿಷ್ಠ ಶೇ.50 ರಷ್ಟು ರೈತರು ಯೋಜನೆಯ ಭಾಗವಾಗಬೇಕು ಎಂದು ಹೇಳಿದ್ದಾರೆ.
ರೈತರು ಅತಿ ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನೈಸರ್ಗಿಕ ವಿಪತ್ತು ಎದುರಾದಾಗ ಅವರ ಶ್ರಮ ಸಂಪೂರ್ಣ ವ್ಯರ್ಥವಾಗುವ ಸಾಧ್ಯತೆ ಇದ್ದು, ಒಂದು ವರ್ಷ ನಷ್ಟವಾಗುತ್ತದೆ. ಈ ಸಂಕಷ್ಟದಿಂದ ದೂರವಿರಿಸಿ ಭದ್ರತೆ ನೀಡಲು ಇರುವುದು ಬೆಳೆ ವಿಮಾ ಯೋಜನೆಯ ಮಾರ್ಗವೊಂದೆ ಎಂದು ಮೋದಿ ಹೇಳಿದ್ದಾರೆ.
ಬೆಳೆ ವಿಮಾ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲು ಜನರಿಂದ ಗರಿಷ್ಠ ಸಹಾಯ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಪ್ರಧಾನಿಯನ್ನು ಹೊಗಳುವುದಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿಲ್ಲ. ಈ ವರೆಗೂ ದೇಶಾದ್ಯಂತ ಶೇ. 20 -25 ಕ್ಕಿಂತ ಹೆಚ್ಚು ರೈತರು ಪ್ರಧಾನಮಂತ್ರಿ ಬೆಲೆ ವಿಮಾ ಯೋಜನೆಯಿಂದ ಪ್ರಯೋಜನ ಪಡೆದಿಲ್ಲ, ಇನ್ನು 2 ವರ್ಷಗಳೊಳಗೆ ದೇಶದ ಶೇ.50 ರಷ್ಟು ರೈತರು ಈ ಯೋಜನೆಯ ಭಾಗವಾಗುವಂತೆ ಮಾಡಲು ಪಣತೊಡಬೇಕು ಎಂದು ಮೋದಿ ಕರೆ ನೀಡಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.