ದೇಶ

ರಾಮ ಹಾಗೂ ಲಕ್ಷ್ಮಣ ವಿರುದ್ಧವೇ ಬಿಹಾರ ಕೋರ್ಟ್ ನಲ್ಲಿ ದೂರು ದಾಖಲು!

Shilpa D

ಪಾಟ್ನಾ: ರಾಮಾಯಣದ ಮರ್ಯಾದಾ ಪುರುಷ ರಾಮ ಹಾಗೂ ಆತನ ತಮ್ಮ ಲಕ್ಷ್ಮಣನ ವಿರುದ್ಧ ಪ್ರಕರಣ ದಾಖಲಿಸಿರುವ ಘಟನೆ ಬಿಹಾರದ ಸೀತಾಮಹ್ರಿ ಜಿಲ್ಲೆಯಲ್ಲಿ  ನಡೆದಿದೆ. ಸೀತಾಮಹ್ರಿ ಜಿಲ್ಲೆಯ ವಕೀಲ ಠಾಕೂರ್ ಚಂದನ್ ಸಿಂಗ್ ಎಂಬುವರು ರಾಮ ಮತ್ತು ಲಕ್ಷ್ಮಣರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

ಅಗಸೊಬ್ಬನ ಮಾತು ಕೇಳಿದ ರಾಮ ಸೀತಾ ಮಾತೆಯನ್ನು ಕಾಡಿಗಟ್ಟಿ , ಆಕೆಯನ್ನು ತ್ಯಜಿಸಿದ್ದು ಸರಿಯಲ್ಲ ಎಂದು ಆರೋಪಿಸಲಾಗಿದೆ. ಇನ್ನು ಸೀತೆಯ ವಿರುದ್ದ ಅಗಸನೊಬ್ಬ ಮಾಡಿದ ಆರೋಪವನ್ನು ಪರಿಗಣಿಸಿದ ರಾಮ ಸತ್ಯಾಸತ್ಯತೆಗಳನ್ನು ಪರಿಶೀಲಿಸದೇ ಆಕೆಯನ್ನು ಕಾಡಿಗೆ ಕಳುಹಿಸಿದ್ದು ತಪ್ಪು. ಆಕೆ ಪವಿತ್ರೆ ಎಂಬುದನ್ನು ಸಾಬೀತು ಪಡಿಸಲು ಅಗ್ನಿ ಪ್ರವೇಶ ಮಾಡಿಸಿದ್ದು ಬಹು ದೊಡ್ಡ ಅಪರಾಧವಾಗಿದೆ. ತಪ್ಪು ಮಾಡದಿದ್ದರೂ ಕಾಡಿನಲ್ಲಿ ಆಕೆ ವನವಾಸ ಅನುಭವಿಸಿದಳು. ಆಕೆ ಕಾಡಿನಲ್ಲಿ ಪ್ರಾಣಿಗಳ ಜೊತೆ ಹೇಗೆ ಒಂಟಿಯಾಗಿ ಬದುಕುತ್ತಾಳೆ ಎಂಬುದನ್ನು ಕ್ರೂರಿ ರಾಮ ಯೋಚಿಸಲಿಲ್ಲ ಎಂದು ಆರೋಪಿಸಲಾಗಿದೆ. ಜೊತೆಗೆ  ಪ್ರಕರಣದಲ್ಲಿ ರಾಮ ಲಕ್ಷ್ಮಣನ ಸಹಾಯ ಪಡೆದಿದ್ದ. ಹೀಗಾಗಿ ಲಕ್ಷ್ಮಣನ ವಿರುದ್ಧವು ದೂರು ದಾಖಲಿಸಲಾಗಿದೆ ಎಂಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.

ಇನ್ನೂ ಈ ಮೊಕದ್ದಮೆಯ ವಿಚಾರಣೆಯನ್ನು ಪಾಟ್ನಾ ನ್ಯಾಯಾಲಯ ಇಂದು ಕೈಗೆತ್ತಿಕೊಳ್ಳಲಿದ್ದು, ಅರ್ಜಿಯನ್ನು ತಿರಸ್ಕರಿಸುವುದೋ ಅಥವಾ ಮಾನ್ಯ ಮಾಡುವುದೋ ಎಂಬುದನ್ನು ಕಾದು ನೋಡಬೇಕಿದೆ.

SCROLL FOR NEXT