ಗುರ್ ಗಾಂವ್: ದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರ ಪತಿ ಬ್ರಿಜ್ ಬೇಡಿ ಭಾನುವಾರ ಸಂಜೆ ಗುರ್ ಗಾಂವ್ ನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಕಿಡ್ನಿ ಹಾಗೂ ಉಸಿರಾಟ ಸಮಸ್ಯೆಯಿಂದಾಗಿ ಕಳೆದ ಗುರುವಾರ ಬ್ರಿಜ್ ಬೇಡಿ ಅವರು ಮೇದಾಂತ ಮೆಡಿಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಳಗ್ಗೆ 11ರ ವೇಳೆಗೆ ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಹಾಗೂ ಫೋಟೋಗ್ರಾಫರ್ ಆಗಿದ್ದ ಬ್ರಿಜ್ ಬೇಡಿ ಅವರು, ಅಮೃತಸರದಲ್ಲಿ ಅವಕಾಶವಂಚಿತ ಮಕ್ಕಳಿಗೆಂದೇ ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಅವರ ನಿಧನದ ಬಳಿಕ ಕಿರಣ್ ಬೇಡಿ ಅವರು ಟ್ವಿಟರ್ ನಲ್ಲಿ ಪತಿಗೆ ಶ್ರದ್ಧಾಂಜಲಿ ಕೋರಿ ಸರಣಿ ಟ್ವೀಟ್ ಮಾಡಿದ್ದಾರೆ.