ಶಶಿ ತರೂರ್ 
ದೇಶ

ಸುನಂದಾ ಕೊಲೆ ಪ್ರಕರಣ:ತರೂರ್ ಗೆ ಶೀಘ್ರವೇ ಸುಳ್ಳು ಪತ್ತೆ ಪರೀಕ್ಷೆ

ಸುನಂದಾ ಪುಷ್ಕರ್‌ ಕೊಲೆ ಪ್ರಕರಣದ ಸಂಬಂಧ, ಸಂಸದ, ಶಶಿ ತರೂರ್‌ ಅವರನ್ನು ಸದ್ಯದಲ್ಲೇ ಸುಳ್ಳು ಪತ್ತೆ ಪರೀಕ್ಷೆ ನಡೆಸಲಾಗುವುದೆಂದು ಹೇಳಲಾಗಿದೆ....

ನವದೆಹಲಿ: ಸುನಂದಾ ಪುಷ್ಕರ್‌ ಕೊಲೆ ಪ್ರಕರಣದ ಸಂಬಂಧ, ಸಂಸದ, ಶಶಿ ತರೂರ್‌ ಅವರನ್ನು ಸದ್ಯದಲ್ಲೇ ಸುಳ್ಳು ಪತ್ತೆ ಪರೀಕ್ಷೆ ನಡೆಸಲಾಗುವುದೆಂದು ಹೇಳಲಾಗಿದೆ.

ಪ್ರಕರಣದ ಸಂಬಂಧವಾಗಿ ನಡೆಯಲಿರುವ ಹೊಸ ತನಿಖೆಯಲ್ಲಿ ತರೂರ್‌ ಅವರ ಕಾರು ಚಾಲಕ ಮತ್ತು ಮನೆ ಕೆಲಸದವರಾದ ಬಜರಂಗಿ ಮತ್ತು ನಾರಾಯಣ್‌ ಸಿಂಗ್‌ ಅವರನ್ನು ವಿಚಾರಣೆಗೊಳಪಡಿಸಲಾಗುವುದು. ತರೂರ್‌ ಅವರ ಕುಟುಂಬ ಸ್ನೇಹಿತನಾಗಿರುವ ಸಂಜಯ್‌ ದೇವನ್‌ ಮತ್ತು ಸುನಂದಾ ಅವರನ್ನು ಪರೀಕ್ಷಿಸಿದ್ದ ವೈದ್ಯರನ್ನು ಕೂಡ ಈ ಸಂಬಂಧವಾಗಿ ಪ್ರಶ್ನಿಸಲಾಗುವುದು ಎಂದು ಮೂಲಗಳು ಹೇಳಿವೆ.

ಸುನಂದಾ ಪುಷ್ಕರ್‌ ಸತ್ತು ಬಿದ್ದಿದ್ದ ಹೊಟೇಲ್‌ ಕೋಣೆಯಲ್ಲಿ ಅಲ್‌ಪ್ರಾಕ್ಸ್‌ ಮಾತ್ರೆಗಳು ಸಿಕ್ಕಿದ್ದವು. ಈ ಮಾತ್ರೆಗಳ ಬ್ಯಾಚ್‌ ಸಂಖ್ಯೆ ಇತ್ಯಾದಿಗಳನ್ನು ಪತ್ತೆ ಹಚ್ಚಿ ಅವುಗಳನ್ನು ಮಾರಿದವರು ಯಾರೆಂದು ಖಚಿತಪಡಿಸಿಕೊಳ್ಳುವ ಸಲುವಾಗಿ ದಿಲ್ಲಿಯ ಲೋಧಿ ಕಾಲೋನಿ ಪ್ರದೇಶದಲ್ಲಿರುವ ಕೆಲವು ಔಷಧದ ಅಂಗಡಿಗಳನ್ನು ತನಿಖಾಧಿಕಾರಿಗಳು ಸಂಪರ್ಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೋಟ್ ಚೋರಿ’ ಸಂವಿಧಾನದ ಮೇಲಿನ ನೇರ ದಾಳಿ; BJP, RSS, ECಯಿಂದ ದೇಶದ್ರೋಹ, ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

ತಮಿಳುನಾಡು ಸರ್ಕಾರಿ ಹಾಸ್ಟೆಲ್​ಗಳ ಮೆನುವಿನಲ್ಲಿ ಗೋಮಾಂಸ ಸೇರ್ಪಡೆ?: ವಿದ್ಯಾರ್ಥಿಗಳ ಮನವಿ ಕುರಿತು ಶೀಘ್ರ ನಿರ್ಧಾರ ಎಂದ ಸಚಿವ!

ಚುನಾವಣಾ ಆಯೋಗದಲ್ಲಿ ಆಂತರಿಕ ಬಿಕ್ಕಟ್ಟು? ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು! ಸುಪ್ರೀಂ ಮಧ್ಯಪ್ರವೇಶಕ್ಕೆ ವಿಪಕ್ಷಗಳ ಆಗ್ರಹ

DJ ಸೌಂಡ್‌ಗೆ ಕಂಪಿಸಿದ ಶಾಲೆ: ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದ 2ನೇ ತರಗತಿ ಬಾಲಕಿ ಸಾವು! video

ಬೇರೆ ಹುಡುಗನ ಜೊತೆ ಸ್ನೇಹ ಬೆಳೆಸಿದ್ದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿ ಹತ್ಯೆ; ಬಳಿಕ ಆತ್ಮಹತ್ಯೆ ಎಂದು ಬಿಂಬಿಸಿದ್ದ ಲೆಕ್ಚರರ್ ಬಂಧನ!